×
Ad

ಕಾರು ಪಲ್ಟಿಯಾಗಿ ಆರು ಮಂದಿಗೆ ಗಾಯ

Update: 2016-11-02 21:21 IST

ಕೊಲ್ಲೂರು, ನ.2: ದನವೊಂದು ರಸ್ತೆಯಲ್ಲಿ ಅಡ್ಡ ಬಂದ ಪರಿಣಾಮ ಕಾರು ಪಲ್ಟಿಯಾಗಿ ಆರು ಮಂದಿ ಗಾಯಗೊಂಡ ಘಟನೆ ನ.1ರಂದು ಬೆಳಗಿನ ಜಾವ ವಂಡ್ಸೆ ಗ್ರಾಮದ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನ ಕ್ರಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಶೋಭಾ ಹಾಗೂ ಅವರ ಮಗಳು ವರ್ಷ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರೇಮಾ, ಸುಂದರಿ, ಭವಿತಾ, ಚಾಲಕ ಯಶವಂತ ಎಂಬವರಿಗೆ ಸಣ್ಣಪುಟ್ಟ ಗಾಯ ಗೊಂಡಿದ್ದಾರೆ. ಇವರೆಲ್ಲ ಉಚ್ಚಿಲ ಸುಭಾಷ್‌ರಸ್ತೆಯ ನಿವಾಸಿಗಳಾಗಿದ್ದಾರೆ. ಇವರು ಕಾರಿನಲ್ಲಿ ಜೋಗಕ್ಕೆ ಹೋಗಿ ವಾಪಸು ಬರುತ್ತಿರುವಾಗ ರಸ್ತೆಯಲ್ಲಿ ದನ ಅಡ್ಡ ಬಂದ ಕಾರಣ ಚಾಲಕ ಒಮ್ಮಲೇ ಬ್ರೇಕ್ ಹಾಕಿದ ಪರಿಣಾಮ ಕಾರು ನಿಯಂತ್ರಣ ತಪ್ಪಿರಸ್ತೆ ಬದಿಯ ಕಟ್ಟಡದ ಗೋಡೆಗೆ ಡಿಕ್ಕಿ ಹೊಡೆದು ಚರಂಡಿಗೆ ಮಗುಚಿ ಬಿತ್ತೆನ್ನಲಾಗಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News