×
Ad

ಕೊಕ್ಕರ್ಣೆಯಲ್ಲಿ ಕರ್ನಾಟಕ ರಾಜ್ಯೋತ್ಸವ

Update: 2016-11-02 21:45 IST

ಬ್ರಹ್ಮಾವರ, ನ.2: ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಯುವಕ ಮಂಡಲ, ಸಂಘ ಸಂಸ್ಥೆಗಳು ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ವಿಷಾಧನೀಯ. ರಾಜ್ಯದ ಎಲ್ಲ ಸಂಘಸಂಸ್ಥೆಗಳು ಕನ್ನಡ ಭಾಷೆಯನ್ನು ಬೆಳೆಸುವತ್ತ ಗಮನ ನೀಡಿದಲ್ಲಿ ಕನ್ನಡ ಭಾಷೆ ಇನ್ನಷ್ಟು ಗಟ್ಟಿಯಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಕೊಕ್ಕರ್ಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮಂಗಳವಾರ ಕೊಕ್ಕರ್ಣೆ ಕ್ರಿಯೇಟಿವ್ ಯೂತ್ ಕ್ಲಬ್ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ, ಕ್ಲಬ್‌ನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಕ್ಕರ್ಣೆಯಿಂದ ಸಂತೆಕಟ್ಟೆಗೆ ಸುಮಾರು 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಡೆಯುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಮಂಜೂರಾ ಗಿದೆ ಎಂದವರು ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ರಘುಪತಿ ಭಟ್, ಮೀನುಗಾರಿಕಾ ಫೆಡರೇಶನ್‌ನ ಯಶಪಾಲ್ ಸುವರ್ಣ, ಉದ್ಯಮಿಗಳಾದ ಸುರೇಶ್ ಶೆಟ್ಟಿ ಗುರ್ಮೆ, ಗಣೇಶ್ ಕಿಣಿ ಬೆಳ್ವೆ, ಎಸ್.ಪ್ರಕಾಶ್ ಶೆಟ್ಟಿ ದಾಂಡೇಲಿ, ವೆಂಕಟೇಶ್ ಗೌಡ, ರಾಧಾಕೃಷ್ಣ ರಾವ್, ಬಾಲಕೃಷ್ಣ ಹೆಗ್ಡೆ, ಆದರ್ಶ ಹೆಗ್ಡೆ ಮತ್ತು ಯೂತ್ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸದಾಶಿವ ಅಮೀನ್ ಕೊಕ್ಕರ್ಣೆ, ರಾಘವೇಂದ್ರ ಜನ್ಸಾಲೆ, ಗೋಪಾಲ ಗಾಣಿಗ, ಸುನಿಲ್ ಭಂಡಾರಿ, ರಾಮಕೃಷ್ಣ ಮಂದಾರ್ತಿ, ವಿದ್ಯಾಧರ ಜಲವಳ್ಳಿ ಅವರನ್ನು ಸನ್ಮಾನಿಸಲಾಯಿತು. ಬಾಲ ಪ್ರತಿಭೆ ಸುರತ್ಕಲ್‌ನ ಅದ್ವಿಕಾ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ವೀರ ಯೋಧರಿಗೆ ಹಾಗೂ ಇತ್ತೀಚೆಗೆ ನಿಧನ ಹೊಂದಿದ ಅಧ್ಯಾಪಕ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ ಇವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News