×
Ad

ನಾಳೆಯಿಂದ ಉಡುಪಿಯಲ್ಲಿ ‘ಸಮಾಧಾನದ ಮಹೋತ್ಸವ’

Update: 2016-11-02 23:52 IST

ಉಡುಪಿ, ನ.2: ಫೆಲೋಶಿಪ್ ಆಫ್ ಉಡುಪಿ ಜಿಲ್ಲಾ ಚರ್ಚ್‌ಗಳ ಒಕ್ಕೂಟದ ವತಿಯಿಂದ ‘ಸಮಾಧಾನದ ಮಹೋತ್ಸವ’ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಉಡುಪಿ ಮಿಷನ್ ಕಾಂಪೌಂಡ್‌ನಲ್ಲಿ ನ.4ರಿಂದ 6ರವರೆಗೆ ಹಮ್ಮಿಕೊಳ್ಳ ಲಾಗಿದೆ ಎಂದು ಮಹೋತ್ಸವದ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಪ್ರವಚನಕಾರರಾಗಿ ಮೋಹನ್ ಲಾಝರಸ್, ಅಪ್ಪಾದೊರೈ ಭಾಗವಹಿಸಲಿರುವರು.
ದೇವರ ವಾಕ್ಯದ ಸಂದೇಶ ಹಾಗೂ ಪ್ರವಚನ, ಧಾರ್ಮಿಕ ಗೀತಗಾಯನ ಕಾರ್ಯಕ್ರಮ ಜರಗಲಿದೆ.


4ರಂದು ಸಂಜೆ 5:30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಬಿಷಪ್ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ, ಸಿಎಸ್‌ಐ ಕರ್ನಾಟಕ ಸದರ್ನ್ ಡಯೋಸಿಸ್‌ನ ಬಿಷಪ್ ವಂ.ಮೋಹನ್ ಮನೋರಾಜ್ ಭಾಗವಹಿಸಲಿರುವರು. ನ.5 ಮತ್ತು 6ರಂದು ಸಂಜೆ 5:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಐ.ಆರ್. ಫೆರ್ನಾಂಡಿಸ್, ಕೆ.ವಿ.ಪೌಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News