ಕೇರಳದ ಮೊದಲ ಮಾದರಿ ಬಡ್ಸ್ ಶಾಲೆ ನಾಳೆ ಉದ್ಘಾಟನೆ
Update: 2016-11-03 11:09 IST
ಕಾಸರಗೋಡು, ನ.3: ಪೆರಿಯ ಚಾಲಿಂಗಾಲ್ನಲ್ಲಿ ನಿರ್ಮಾಣಗೊಂಡಿರುವ ರಾಜ್ಯದ ಮೊದಲ ಮಾದರಿ ಬಡ್ಸ್ ಶಾಲೆ ನವೆಂಬರ್ 4ರಂದು ಉದ್ಘಾಟನೆಗೊಳ್ಳಲಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ನೂತನ ಶಾಲೆಯನ್ನು ಉದ್ಘಾಟಿಸುವರು.
ಪೂರ್ವಾಹ್ನ 11 ಗಂಟೆಗೆ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ.ಕುಂಞರಾಮನ್ ವಹಿಸುವರು ಸಮಾರಂಭದಲ್ಲಿ ರಾಜ್ಯ ಇ.ಚಂದ್ರಶೇಖರನ್, ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ಸಂಸದ ಪಿ.ಕರುಣಾಕರನ್, ಶಾಸಕರಾದ ಪಿ.ಬಿ.ಅಬ್ದುರ್ರಝಾಕ್, ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜೆ.ಸಿ.ಬಶೀರ್, ಪಂಚಾಯತ್ ಅಧ್ಯಕ್ಷೆ ಶಾರದಾ ಎಸ್. ನಾಯರ್ ಉಪಸ್ಥಿತರಿರುವರು.
ನಬಾರ್ಡ್ ಆರ್‌ಐಡಿಎಫ್ ಯೋಜನೆಯಡಿ 1.45 ಕೋ.ರೂ. ವೆಚ್ಚದಲ್ಲಿ ಈ ಶಾಲೆಯನ್ನು ನಿರ್ಮಿಸಲಾಗಿದೆ.