×
Ad

ಗೋಪಾಲ ಪೂಜಾರಿಯಿಂದ ನಿಗಮ ಅಧ್ಯಕ್ಷ ಸ್ಥಾನ ತಿರಸ್ಕಾರ?

Update: 2016-11-03 12:37 IST

ಉಡುಪಿ, ನ.3: ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರನ್ನು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರಕಾರ ನೇಮಿಸಿದೆ. ಕಳೆದ ಸಚಿವ ಸಂಪುಟದ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದು, ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಉಡುಪಿಯ ಪ್ರಮೋದ್ ಮದ್ವರಾಜ್‌ರಿಂದ ಅವಕಾಶ ಕಳೆದುಕೊಂಡ ಗೋಪಾಲ ಪೂಜಾರಿ ತನಗೆ ನೀಡಿದ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿರುವ ವರದಿಗಳಿವೆ.
ಕ್ಷೇತ್ರದ ಶಾಸಕನಾಗಿ ಮಾಡಲು ಸಾಕಷ್ಟು ಕೆಲಸಗಳಿರುವುದರಿಂದ ನಿಗಮದ ಅಧ್ಯಕ್ಷ ಸ್ಥಾನದ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ ಎಂದವರು ಹೇಳಿರುವುದಾಗಿ ವರದಿಯಾಗಿದೆ. ಬೆಂಗಳೂರಿನಲ್ಲಿರುವ ಗೋಪಾಲ ಪೂಜಾರಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಸತತವಾಗಿ ನಡೆಸಿದ ಪ್ರಯತ್ನ ಕೈಗೂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News