×
Ad

ಭೋಪಾಲ್ ಎನ್‌ಕೌಂಟರ್ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಸ್‌ಐಒ

Update: 2016-11-03 16:10 IST

ಮಂಗಳೂರು, ನ.3: ಭೋಪಾಲ್ ಕೇಂದ್ರ ಕಾರಾಗೃಹದಿಂದ ಪಾರಾಗಲು ಯತ್ನಿಸಿದ ಆರೋಪದಲ್ಲಿ ಎಂಟು ಮಂದಿ ಯುವಕರನ್ನು ಎನ್‌ಕೌಂಟರ್ ಮಾಡಿರುವ ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಎಸ್‌ಐಒ ದ.ಕ. ಜಿಲ್ಲಾ ಸಮಿತಿಯು ದ.ಕ. ಜಿಲ್ಲಾಧಿಕಾರಿ ಕಚೇರಿಯೆದುದುರು ಇಂದು ಧರಣಿ ನಡೆಸಿದರು.
ಈ ಎನ್‌ಕೌಂಟರ್‌ನಲ್ಲಿ ಪೊಲೀಸರ ಕ್ರಮ ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಈ ಕುರಿತಂತೆ ಪೊಲೀಸರು ನೀಡುತ್ತಿರುವ ಬಾಲಿಶ ಹೇಳಿಕೆ ಹಾಗೂ ಸ್ಥಳೀಯರು ಮಾಡಿರುವ ಎನ್‌ಕೌಂಟರ್ ವೀಡಿಯೊ ತುಣುಕುಗಳು ಇದೊಂದು ಪೂರ್ವ ನಿರ್ಧರಿತ ಕೃತ್ಯ ಎಂಬಂತೆ ತೋರುತ್ತಿದೆ. ಆದ್ದರಿಂದ ಈ ಪ್ರಕರಣದ ನ್ಯಾಯಾಂಗ ತನಿಖೆಯಾಗಲಿ ಎಂದು ಧರಣಿನಿರತರು ಒತ್ತಾಯಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News