ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಮುಖ್ತಾರನ್ ಮಾಯಿ ಪಾಕಿಸ್ತಾದ ಫ್ಯಾಶನ್ ರ‍್ಯಾಂಪ್ ನಲ್ಲಿ

Update: 2016-11-03 11:04 GMT

ಇಸ್ಲಾಮಾಬಾದ್,ನ. 3: ಪಾಕಿಸ್ತಾನದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮುಖ್ತಾರನ್ ಮಯಿ ಕರಾಚಿಯ ಫ್ಯಾಶನ್ ವೀಕ್‌ನಲ್ಲಿ ರೂಪದರ್ಶಿಯಾಗಿ ರ್ಯಾಂಪ್‌ನಲ್ಲಿ ನಡಿಗೆ ಹಾಕಿದ್ದಾರೆಂದು ವರದಿಯಾಗಿದೆ. ತನ್ನ ಗ್ರಾಮದಲ್ಲಿ ಮಹಿಳೆಯರಿಗಾಗಿ ಆಶ್ರಯ ಕೇಂದ್ರವನ್ನು ಸ್ಥಾಪಿಸಿ ಸಮಾಜ ಸೇವೆಗಿಳಿದಿರುವ ಅವರನ್ನು ಡಿಸೈನರ್ ರೋಸಿನಾ ಮುಬೀನಾ ಫ್ಯಾಶನ್ ಪೆರೇಡ್‌ನಲ್ಲಿ ಭಾಗಿಯಾಗುವಂತೆ ಮಾಡಿದವರು.

ಅಕ್ರಮಗಳ ವಿರುದ್ಧ ಮಹಿಳೆಯ ಹೋರಾಟದ ಕುರಿತು ಜಾಗೃತಿ ಮೂಡಿಸಲಿಕ್ಕಾಗಿ ಫ್ಯಾಶನ್‌ಶೋದಲ್ಲಿ ಭಾಗವಹಿಸಿದ್ದೇನೆ ಎಂದು ಮುಖ್ತಾರನ್ ಮಾಯಿ ಹೇಳಿದ್ದಾರೆ. ಅವರನ್ನು ಗ್ಲಾಮರ್‌ಗರ್ಲ್‌ಆಗಿ ಪ್ರಸ್ತುತಪಡಿಸಲು ತಾನು ಇಚ್ಛಿಸುವುದಿಲ್ಲ ಎಂದು ಈ ಕಾರ್ಯಕ್ರಮದ ಮುಂಚೆ ರೋಸಿನಾ ಹೇಳಿದ್ದರು. "ಆಕೆ ಆತ್ಮಹತ್ಯೆಯ ದಾರಿ ನೋಡಿಕೊಳ್ಳಲಿಲ್ಲ, ವಿಷಾದಕ್ಕೂ ಬಲಿಯಾಗಲಿಲ್ಲ. ಅವರು ಜೀವನದೊಂದಿಗೆ ಮುಂದೆ ಸಾಗಿದರು" ಎಂದು ರೋಸಿನಾ ಮುಖ್ತಾರನ್ ಮಾಯಿಯನ್ನು ಪ್ರಶಂಸಿದ್ದಾರೆ.

 ಮುಖ್ತಾರನ್‌ರಿಂದ ಪ್ರೇರಣೆ ಪಡೆದು ರೋಸಿನಾ ಫ್ಯಾಶನ್ ಪೆರೇಡ್‌ಗೆ ಝಿಂದಗಿ ಕೆ ರಂಗ್ ಎಂದು ಹೆಸರಿಸಿದ್ದರು.

2002ರಲ್ಲಿ ತನ್ನ ಹನ್ನೆರಡನೆ ಹರೆಯದಲಿ ಆಕೆಯ ಸಹೋದರ ಮೇಲ್ಜಾತಿಯ ಮಹಿಳೆಯನ್ನುಪ್ರೇಮಿಸಿದ್ದಾನೆ ಎಂದು ಗೋತ್ರಸಮಿತಿಯೊಂದು ಮುಖ್ತಾರನ್‌ರನ್ನು ಸಾಮೂಹಿಕ ಅತ್ಯಾಚಾರಗೈಯ್ಯುವ ತೀರ್ಪು ನೀಡಿತ್ತು. ಅತ್ಯಾಚಾರಕ್ಕೊಳಪಡಿಸಿದವರ ವಿರುದ್ಧ ಕೇಸು ನಡೆಸಿದ್ದರೂ ಸುಪ್ರೀಂಕೋರ್ಟಿನಲ್ಲಿ ಅವರೆಲ್ಲರೂ ಖುಲಾಸೆಯಾಗಿದ್ದರು ಎಂದುವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News