×
Ad

ಶಾಲಾಬಸ್‌ನಲ್ಲಿ ಒಂದನೆ ತರಗತಿ ವಿದ್ಯಾರ್ಥಿಗೆ ಹಲ್ಲೆಗೈದ ಬಸ್ ಚಾಲಕ

Update: 2016-11-03 19:22 IST

ಮಂಜೇಶ್ವರ, ನ.3: ಶಾಲಾ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಕ್ಕ ಎಂಬ ಕಾರಣಕ್ಕೆ ಒಂದನೆ ತರಗತಿ ವಿದ್ಯಾರ್ಥಿಯೊಬ್ಬನಿಗೆ ಶಾಲಾ ಬಸ್ ಚಾಲಕ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಘಟನೆ ಬಂದ್ಯೋಡು ಪರಿಸರದಲ್ಲಿ ಸಂಭವಿಸಿದೆ.

ಬಂದ್ಯೋಡು ಸಮೀಪವಿರುವ ಕುನಿಲ್ ಆಂಗ್ಲ ಮಾದ್ಯಮ ಶಾಲೆಯ ಒಂದನೆ ತರಗತಿ ವಿದ್ಯಾರ್ಥಿ, ಮೀಯಪದವು ಮುನ್ನಿಪ್ಪಾಡಿ ನಿವಾಸಿ ಹಾಶಿಕ್ ಎಂಬವರ ಪುತ್ರ ಶಹಲಾನ್ (6) ಹಲ್ಲೆಗೀಡಾದ ವಿದ್ಯಾರ್ಥಿ.

ಶಾಲೆಯಿಂದ ಮನೆಗೆ ಮರಳುತ್ತಿರುವಾಗ ಚಾಲಕ ಹಲ್ಲೆಗೈದಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಬಾಲಕ ಮನೆಯವರಿಗೆ ನೀಡಿದ ಮಾಹಿತಿಯಂತೆ ಮನೆಯವರು ಬಾಲಕನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾಹಿತಿ ಪಡೆದು ಆಸ್ಪತ್ರೆಗೆ ಆಗಮಿಸಿದ ಚೈಲ್ಡ್‌ಲೈನ್ ಅಧಿಕಾರಿಗಳು ಬಾಲಕನಿಂದ ಮಾಹಿತಿ ಪಡೆದು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News