ಸಹೋದ್ಯೋಗಿಯ ಹತ್ಯೆ: ದಿಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ಗೆ ಜೀವಾವಧಿ ಶಿಕ್ಷೆ

Update: 2016-11-03 15:24 GMT

ಹೊಸದಿಲ್ಲಿ, ನ.3: ಸಹೋದ್ಯೋಗಿಯೊಬ್ಬನನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ದಿಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಅದೊಂದು ಆಕಸ್ಮಿಕ ಪ್ರಕರಣವೆಂಬ ಆರೋಪಿಯ ವಾದವನ್ನು ತಳ್ಳಿ ಹಾಕಿದ ನ್ಯಾಯಾಲಯ, ಬಂದೂಕನ್ನು ನಿಭಾಯಿಸುವ ವೇಳೆ ತರಬೇತಿ ಪಡೆದ ಪೊಲೀಸ್ ಸಿಬ್ಬಂದಿಯೊಬ್ಬ 'ಹೆಚ್ಚು ಜಾಗ್ರತೆ' ವಹಿಸುವುದನ್ನು ನಿರೀಕ್ಷಿಸಲಾಗುತ್ತದೆಂದು ಹೇಳಿದೆ.


ಐಪಿಸಿಯ ಸೆ.302ರನ್ವಯ ಕಾನ್‌ಸ್ಟೇಬಲ್ ಸುನೀಲ್ ತಪ್ಪಿತಸ್ಥನೆಂದು ತೀರ್ಮಾನಿಸಿದ ಹೆಚ್ಚುವರಿ ಹೆಚ್ಚುವರಿ ಸತ್ರ ನ್ಯಾಯಾಧೀಶ ಸಂದೀಪ್ ಯಾದವ್, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.


ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ 2012ರ ಮೇ 7ರಂದು ಈ ಪ್ರಕರಣ ನಡೆದಿತ್ತು. ಆರೋಪಿ ಸುನೀಲ್ ಸ್ವಯಂಚಾಲಿತ ರೈಫಲ್‌ನಿಂದ ಸಹೋದ್ಯೋಗಿ ದಿನೇಶ್ ಎಂಬಾತನ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆಂದು ಪ್ರಾಸಿಕ್ಯೂಶನ್ ಆರೋಪಿಸಿತ್ತು. ಆದರೆ, ಬಂದೂಕನ್ನು ದೂರ ಇರಿಸುವಾಗ ಅದು ಆಕಸ್ಮಿಕವಾಗಿ ಸಿಡಿದಿತ್ತೆಂದು ಆರೋಪಿ ವಾದಿಸಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News