×
Ad

ತಾಯಿಗೆ ಕತ್ತಿಯಿಂದ ಕಡಿದ ಮಗ

Update: 2016-11-03 21:00 IST

ಬೆಳ್ತಂಗಡಿ, ನ.3: ತಾಯಿ ಬೈದರೆಂದು ಕೋಪಿಸಿಕೊಂಡ ಮಗ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ನ್ಯಾಯತರ್ಪು ಗ್ರಾಮದ ಬದ್ಯಾರು ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಕುಶಾಲಪ್ಪ(43) ಎಂಬಾತನೇ ತನ್ನ ತಾಯಿಗೆ ಕತ್ತಿಯಿಂದ ಕಡಿದು ಹಲ್ಲೆಗೈದ ಆರೋಪಿ. ಬುಧವಾರ ತಾಯಿ ಏನೋ ಬೈದರೆಂದು ಕೋಪಿಸಿಕೊಂಡ ಕುಶಾಲಪ್ಪಅಲ್ಲೇ ಇದ್ದ ಕತ್ತಿಯಿಂದ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಭುಜ, ಕೈ ಬೆರಳುಗಳು ಹಾಗೂ ಕೈ ಗಾಯವಾಗಿದ್ದು ಲಲಿತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಗುರುವಾರ ಬೆಳಗ್ಗೆ ಕುಶಾಲಪ್ಪನನ್ನು ಬೆಳ್ತಂಗಡಿ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News