ಸಮಸ್ತ ಶರೀಅತ್ ಸಂರಕ್ಷಣಾ ಕೋ-ಅರ್ಡಿನೇಶನ್ ದ.ಕ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ
ಮಂಗಳೂರು, ನ.3: ಮುಸ್ಲಿಂ ವೈಯುಕ್ತಿಕ ನಿಯಮ, ಮುಸ್ಲಿಂ ಶರೀಅತ್‌ನ್ನು ತಿದ್ದುಪಡಿ ಮಾಡುವ ಮತ್ತು ಏಕನೀತಿ ಸಂತೆಯನ್ನು ಜಾರಿಗೆ ತರುವ ಕೇಂದ್ರ ಸರಕಾರದ ನಿಯಮವನ್ನು ವಿರೋಧಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಕ ಉಸ್ತಾದ್‌ರ ಅಧ್ಯಕ್ಷತೆಯಲ್ಲಿ ಮತ್ತು ಮಿತ್ತಬೈಲ್ ಉಸ್ತಾದ್‌ರ ಸಾನಿಧ್ಯದಲ್ಲಿ ಮಂಗಳೂರಿನ ಖಾಝಿ ಹೌಸಿನಲ್ಲಿ ನಡೆದ ಕರ್ನಾಟಕ ಸಮಸ್ತದ ವಿವಿಧ ಸಂಘಟನೆಗಳ ಉಪಸ್ಥಿತಿಯಲ್ಲಿ ಸಮಸ್ತ ಶರೀಅತ್ ಸಂರಕ್ಷಣಾ ಕೋ-ಅರ್ಡಿನೇಶನ್ ದ..ಕ. ಜಿಲ್ಲಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರಾಗಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಉಪಾಧ್ಯಕ್ಷರಾಗಿ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು, ಪ್ರಧಾನ ಸಂಚಾಲಕರಾಗಿ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಸಂಚಾಲಕರಾಗಿ ಇಸ್ಹಾಕ್ ಫೈಝಿ, ಕೆ.ಎಲ್.ಉಮರ್ ದಾರಿಮಿ, ಕೋಶಾಧಿಕಾರಿಯಾಗಿ ಸುಲೈಮಾನ್ ಹಾಜಿ ಕಲ್ಲಡ್ಕ, ಸಲಹೆಗಾರರಾಗಿ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಹಾಜಿ ಇಬ್ರಾಹೀಂ ಕೋಡಿಜಾಲ್, ಐ.ಮೊಯ್ದಿನಬ್ಬ ಹಾಜಿ, ಅಹ್ಮದ್ ಬಾಷಾ ತಂಙಳ್, ಮುಹಮ್ಮದ್ ಹನೀಫ್ ಹಾಜಿ, ಮಾಧ್ಯಮ ಕಾರ್ಯದರ್ಶಿಗಳಾಗಿ ಇಕ್ಬಾಲ್ ಅಹ್ಮದ್ ಮುಲ್ಕಿ, ಇಬ್ರಾಹೀಂ ಕೊಣಾಜೆ, ರಿಯಾಝ್ ಬಂದರ್ ಹಾಗೂ ಸಮಿತಿ ಸದಸ್ಯರಾಗಿ 15 ಮಂದಿಯನ್ನು ಆಯ್ಕೆ ಮಾಡಲಾಯಿತು.