ಏಕರೂಪ ನಾಗರಿಕ ಸಂಹಿತೆ: ಸಹಿ ಸಂಗ್ರಹ ಯಶಸ್ವಿಗೆ ಖಾಝಿ ಕರೆ
Update: 2016-11-03 21:18 IST
ಮಂಗಳೂರು, ನ.3: ಸಮಸ್ತ ಶರೀಅತ್ ಸಂರಕ್ಷಣಾ ಕೋ ಆರ್ಡಿನೇಶನ್ ದ.ಕ. ಜಿಲ್ಲಾ ಸಮಿತಿಯ ತುರ್ತು ಸಭೆಯಲ್ಲಿ ಶರೀಅತ್‌ನ ಈಗಿನ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಯಿತು.
ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ತೀರ್ಮಾನದಂತೆ ಏಕ ನೀತಿ ಸಂಹಿತೆಯ ವಿರುದ್ಧ ಸಹಿ ಸಂಗ್ರಹವನ್ನು ಸಂಪೂರ್ಣವಾಗಿ ನಡೆಸುವಂತೆ ನೋಡಿಕೊಳ್ಳಬೇಕೆಂದು ಕೋ ಆರ್ಡಿನೇಶನ್‌ನ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಸಭೆಯಲ್ಲಿ ಜನರಲ್ ಕನ್ವೀನರ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕನ್ವೀನರ್ ಇಸ್ಹಾಕ್ ಫೈಝಿ, ಮುಹಮ್ಮದ್ ಹನೀಫ್ ಹಾಜಿ, ಇಕ್ಬಾಲ್ ಅಹ್ಮದ್ ಮುಲ್ಕಿ, ಸಮದ್ ಹಾಜಿ, ಇಬ್ರಾಹೀಂ ಕೊಣಾಜೆ ಮತ್ತು ರಿಯಾಝುದ್ದೀನ್ ಹಾಜಿ ಬಂದರ್ ಮೊದಲಾದವರು ಉಪಸ್ಥಿತರಿದ್ದರು.