ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು
Update: 2016-11-04 00:09 IST
ಕುಂದಾಪುರ, ನ.3: ಉಪ್ಪಿನಕುದ್ರು ಹೊಳೆಯಲಿ ್ಲದೋಣಿಯನ್ನು ಸಾಗಿಸಲು ಬಳಸುವ ಬಿದಿರು ಹುಟ್ಟು ತುಂಡಾಗಿ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಮೃತಪಟ್ಟವರನ್ನು ರಾಮು(40) ಎಂದು ಗುರುತಿಸಲಾಗಿದೆ.
ರಾಮು ರಣಧೀರ ಎಂಬವರ ಬಳಿ ಕೆಲಸ ಮಾಡಿಕೊಂಡಿದ್ದು, ದೋಣಿಯನ್ನು ರಿಪೇರಿ ಹಾಗೂ ಪೈಂಟಿಂಗ್‌ಗಾಗಿ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ರಾಮು ಹೊಳೆಗೆ ಬಿದ್ದ ತಕ್ಷಣ ರಣಧೀರ ನೀರಿಗೆ ಹಾರಿ ಅವರನ್ನು ಹುಡುಕುವ ಪ್ರಯತ್ನ ನಡೆಸಿದರೂ ನೀರಿನ ಸುಳಿಯಲ್ಲಿ ಅವರು ಸಿಕ್ಕಿರಲಿಲ್ಲ. ಬಳಿಕ ಸ್ಥಳೀಯರ ಸಹಾಯದಿಂದ ರಾಮು ಅವರನ್ನು ಮೇಲೆತ್ತಿದಾಗ ಅವರು ಮೃತಪಟ್ಟಿದ್ದರು ಎಂದು ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.