ಲೈಂಗಿಕ ಕಿರುಕುಳ ಯತ್ನ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿಲ್ಲ: ಆದಿವಾಸಿ ಮಹಿಳೆಯಿಂದ ಪೊಲೀಸರ ವಿರುದ್ಧ ದೂರು

Update: 2016-11-04 10:01 GMT

ತಿರುವಲ್ಲ, ನ. 4: ಆದಿವಾಸಿ ಮಹಿಳೆಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದವರ ವಿರುದ್ಧ ದೂರು ನೀಡಿದರೂ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದು ದೂರುನೀಡಿದ ಗೃಹಿಣಿ ಆರೋಪಿಸಿದ್ದಾರೆ. ಈ ಕುರಿತು ಅವರು ಜಿಲ್ಲಾ ಅಡಿಷನಲ್ ಮ್ಯಾಜಿಸ್ಟ್ರೇಟ್‌ಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ತಿರುವಲ್ಲ ನಗರಸಭೆ ವ್ಯಾಪ್ತಿಯ ಕೋಟ್ಟತ್ತೋಡ್ ಮೈಲಾಮೂಟ್ಟಿಲ್ ಅಜಯನ್ ಎಂಬಾತನ ವಿರುದ್ಧ ಮಹಿಳೆ ದೂರು ನೀಡಿದ್ದರು. ಮನೆಗೆ ಹಲವು ಬಾರಿ ಬಂದಿದ್ದ ಅಜಯನ್ ತನ್ನ ಫೋಟೊವನ್ನು ದೊರಕಿಸಿಕೊಂಡ ಬಳಿಕ ಅದನ್ನು ಮೋರ್ಫ್ ಮಾಡಿ ಅಶ್ಲೀಲವಾಗಿ ಪ್ರದರ್ಶಿಸುವೆ ಎಂದು ಬೆದರಿಕೆಯೊಡ್ಡಿ ಲೈಂಗಿಕ ಕಿರುಕುಳ ನೀಡಲು ಶ್ರಮಿಸಿದ್ದಾನೆ ಎಂದು ಆದಿವಾಸಿ ಗೃಹಿಣಿ ದೂರು ನೀಡಿದ್ದರು. ಆದರೆ ಪೊಲೀಸರು ತನಿಖೆ ಗೆ ಮುಂದಾಗಿಲ್ಲ ಬದಲಾಗಿ ಗುರುವಾರ ಠಾಣೆಯಿಂದ ಒಬ್ಬ ಪೊಲೀಸ್ ಕರೆಸಿಕೊಂಡು ಪ್ರಕರಣದಲ್ಲಿ ರಾಜಿಮಾಡಿಕೊಳ್ಳಲು ಹೇಳಿದ್ದಾನೆಂದು ಮಹಿಳೆ ಹೇಳಿದ್ದಾರೆ.

ಪೊಲೀಸರಿಗೆ ದೂರು ನೀಡಿದ ಬಳಿಕ ಅಜಯನ್ ರಸ್ತೆಯಲ್ಲಿ ತಡೆದು ನಿಲ್ಲಿಸಿ ಬೆದರಿಕೆ ಹಾಕಿದ್ದಾನೆ ಎಂದು ಆಕೆ ತಿಳಿಸಿದ್ದಾರೆ. ರಾಜಿಮಾಡಿಕೊಳ್ಳಲು ಪೊಲೀಸರು ಒತ್ತಡ ಹೇರುತ್ತಿದ್ದಾರೆಂದು ಅಡಿಷನಲ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನೀಡಿದ ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆಂದುವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News