ಮಂಜನಾಡಿ: ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಮೃತ್ಯು
Update: 2016-11-04 16:56 IST
ಉಳ್ಳಾಲ, ನ.4: ಶಾಲಾ ಕಟ್ಟಡವೊಂದರಿಂದ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ವಸತಿ ಶಾಲೆಯೊಂದರಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಉಪ್ಪಿನಂಗಡಿಯ ಮುಝಮಿಲ್ (14) ಮೃತಪಟ್ಟ ವಿದ್ಯಾರ್ಥಿ.
ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಧಾರ್ಮಿಕ ಗುರುಗಳು ಸೇರಿದಂತೆ ಸಿಬ್ಬಂದಿ ಶಾಲಾ ವಠಾರದೊಳಗಿನ ಮಸೀದಿಗೆ ವಿಶೇಷ ಪ್ರಾರ್ಥನೆಗೆಂದು ತೆರಳಿದ್ದರು. ಈ ವೇಳೆ ಮುಝಮಿಲ್ ಕುರ್ಆನ್ ಗ್ರಂಥವನ್ನು ಇಡಲೆಂದು ಕೊಠಡಿಯೊಳಗೆ ಬಂದಿದ್ದ. ಸುಮಾರು ಒಂದು ಗಂಟೆಯ ನಂತರ ಮಸೀದಿಯಿಂದ ಹೊರಬಂದವರಿಗೆ ಮುಝಮಿಲ್‌ನ ಮೃತದೇಹ ಶಾಲಾ ವಠಾರದಲ್ಲಿ ಕಂಡುಬಂದಿದೆ. ಕಟ್ಟಡದ ನಾಲ್ಕನೆ ಮಹಡಿಯಿಂದ ಬಾಲಕ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.