×
Ad

ವಡಂಕಚೇರಿ ಸಾಮೂಹಿಕ ಅತ್ಯಾಚಾರ; ಆರೋಪಿ ಜಯಂತ್‌ನನ್ನು ಹೊರಹಾಕಲು ಸಿಪಿಎಂ ಪ್ರಾದೇಶಿಕ ಸಮಿತಿಶಿಫಾರಸು

Update: 2016-11-04 17:09 IST

ತೃಶೂರ್, ನ. 4: ಸಾಮೂಹಿಕ ಅತ್ಯಾಚಾರಪ್ರಕರಣದಲ್ಲಿ ಆರೋಪಿಯೆಂದು ಹೆಸರಿಸಲಾದ ಸಿಪಿಎಂ ಪ್ರಾದೇಶಿಕ ನಾಯಕ ವಡಂಕಚೇರಿ ನಗರಸಭಾ ಕೌನ್ಸಿಲರ್ ಪಿಎನ್ ಜಯಂತ್‌ನನ್ನು ಪಕ್ಷದಿಂದ ವಜಾಗೊಳಿಸಬೇಕೆಂದು ಸಿಪಿಎಂ ವಲಯ ಸಮಿತಿ ಶಿಫಾರಸು ಮಾಡಿದೆ ಎಂದುವರದಿಯಾಗಿದೆ. ಇಂದು ಸೇರಿದ್ದ ವಡಂಕಚೇರಿ ಏರಿಯಾ ಕಮಿಟಿ ತುರ್ತು ಸಭೆ ಜಿಲ್ಲಾ ಸೆಕ್ರಟರಿಯೇಟ್‌ಗೆ ಈ ಶಿಫಾರಸು ಮಾಡಿದೆ.

ಇಂದು ಸಂಜೆ ಸೇರಲಿರುವ ಜಿಲ್ಲಾ ಸೆಕ್ರಟರಿಯೇಟ್ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನವಾಗಲಿದೆ. ಜಯಂತ್‌ಗೆ ಪಾರ್ಟಿಯ ಪ್ರಾಥಮಿಕ ಸದಸ್ಯತ್ವ ಮಾತ್ರ ಇದೆ. ಆದ್ದರಿಂದ ಆತನನ್ನು ಪಕ್ಷದಿಂದಲೇ ಹೊರಹಾಕಬೇಕು ಎಂದು ಏರಿಯಾ ಕಮಿಟಿ ಶಿಫಾರಸು ಮಾಡಿದೆ. ಡಿವೈಎಫ್‌ಐ ಬ್ಲಾಕ್ ಜಂಟಿ ಕಾರ್ಯದರ್ಶಿ ಸ್ಥಾನದಿಂದಲೇ ಜಯಂತ್‌ನನ್ನು ವಜಾಗೊಳಿಸಬೇಕೆಂದು ತೀರ್ಮಾನಿಸಲಾಗಿದೆ. ಆದರೆ ಕೌನ್ಸಿಲರ್ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿಲ್ಲ ಎಂದು ಸಿಪಿಎಂ ತೀರ್ಮಾನಿಸಿದೆ.ಆರೋಪ ಸಾಬೀತಾದರೆ ಮಾತ್ರವೇ ಈತನ ವಿರುದ್ಧ ಕ್ರಮ ಜರಗಿಸಬೇಕೆಂದು ಜಿಲ್ಲಾ ಸಮಿತಿ ನಿರ್ಧರಿಸಿತ್ತು. ಆದರೆ ಆರೋಪಕ್ಕೆ ಸಂಬಂಧಿಸಿ ಪೊಲೀಸರು ತನಿಖೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಪಾರ್ಟಿ ಜಯಂತ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News