×
Ad

9ವರ್ಷದ ಅವಳಿ ಸಹೋದರಿಯರನ್ನು ಅತ್ಯಾಚಾರಗೈದ ತಂದೆ, ಮಗ !

Update: 2016-11-04 17:11 IST

ಹೈದರಾಬಾದ್,ನ. 4: ಒಂಬತ್ತುವರ್ಷ ವಯಸ್ಸಿನ ಅವಳಿ ಸಹೋದರಿಯರಾದ ಬಾಲಕಿಯರಿಬ್ಬರನ್ನು ನೆರಯವರಾದ ತಂದೆ ಮತ್ತು ಆತನ ಮಗ ಲೈಂಗಿಕ ಅತ್ಯಾಚಾರಗೈದ ಘಟನೆ ಹೈದರಾಬಾದ್‌ನ ಮೈಲಾರ್ ದೇವ ಪಳ್ಳಿಯಿಂದ ವರದಿಯಾಗಿದೆ. ಇವರಿಬ್ಬರು ಈ ಬಾಲಕಿರಯನ್ನು ಒಂದುವರ್ಷಗಳಿಂದೀಚೆಗೆ ಅತ್ಯಾಚಾರವೆಸಗುತ್ತಿದ್ದರು. ಇದು ಬಾಲಕಿಯರ ತಾಯಿಯ ಸಮ್ಮತಿಯಿಂದಲೇ ನಡೆಯುತ್ತಿತ್ತು ಎಂದು ವೆಬ್‌ಪೋರ್ಟಲೊಂದು ವರದಿಮಾಡಿದೆ. ಮೈಲಾರ್‌ದೇವ ಪಳ್ಳಿಯ ಜಾಫರ್(40) ಮತ್ತು ಈತನ ಅಪ್ರಾಪ್ತ ವಯಸ್ಸಿನ ಮಗನನ್ನು ಅತ್ಯಾಚಾರ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಒಂದುವರ್ಷದಿಂದ ಇವರು ಈ ದುಷ್ಕೃತ್ಯಕ್ಕೆ ಬಾಲಕಿಯರನ್ನು ಬಳಸುತ್ತಿದ್ದರು ಎನ್ನಲಾಗಿದೆ. ಇದನ್ನು ಸಹಿಸಲಾಗದೆ ನಾಲ್ಕನೆ ಕ್ಲಾಸಿನಲ್ಲಿ ಕಲಿಯುತ್ತಿದ್ದ ಬಾಲಕಿಯರಲ್ಲಿಒಬ್ಬಳು ಅಧ್ಯಾಪಕಿಗೆ ವಿಷಯವನ್ನುತಿಳಿಸಿದ್ದಳು. ನಂತರ ಅಧ್ಯಾಪಕಿ ಮಕ್ಕಳಿಗಾಗಿ ಸೇವಾ ನಿರತ ಸಂಘಟನೆಯೊಂದಕ್ಕೆ ವಿಷಯ ತಿಳಿಸಿದ್ದರು.

ಸಂಘಟನೆ ಶಂಸಾಬಾದ್ ಡೆಪ್ಯುಟಿ ಕಮೀಶನರ್ ಪಿವಿ ಪದ್ಮಜಾರಿಗೆ ದೂರು ನೀಡಿತ್ತು. ಆನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News