1984ರ ದಂಗೆ ಪ್ರಕರಣಗಳ ವರ್ಗಾವಣೆ ಕೋರಿದ್ದ ಸಜ್ಜನ್ ಕುಮಾರ್ ಅರ್ಜಿ ವಜಾ

Update: 2016-11-04 12:58 GMT

ಹೊಸದಿಲ್ಲಿ,ನ.4: 1984ರ ಸಿಖ್ ವಿರೋಧಿ ದಂಗೆಗಳಿಗೆ ಸಂಬಂಧಿಸಿದ ತಮ್ಮ ವಿರುದ್ಧದ ಪ್ರಕರಣಗಳನ್ನು ಬೇರೊಂದು ಪೀಠಕ್ಕೆ ವರ್ಗಾಯಿಸುವಂತೆ ಕೋರಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಇಂದು ವಜಾಗೊಳಿಸಿತು. ಅರ್ಜಿಗಳಲ್ಲಿ ಎತ್ತಲಾಗಿರುವ ತಕರಾರುಗಳು ನಿರಾಧಾರ ಮತ್ತು ತಪ್ಪು ಗ್ರಹಿಕೆಗಳಿಂದ ಕೂಡಿವೆ ಮತ್ತು ಈ ಅರ್ಜಿಗಳು ಕಾನೂನಿನ ದುರುಪಯೋಗದ ಪ್ರಯತ್ನಗಳಾಗಿವೆ ಎಂದು ಅದು ಅರ್ಜಿದಾರರನ್ನು ತರಾಟೆ ಗೆತ್ತಿಕೊಂಡಿತು.

ವಿಭಾಗೀಯ ಪೀಠದ ನ್ಯಾಯಾಧೀಶರ ಪೈಕಿ ಓರ್ವರು ತಮ್ಮ ವಿರುದ್ಧ ತಾರತಮ್ಯ ಹೊಂದಿದ್ದಾರೆ ಎಂದು ಅರ್ಜಿಗಳಲ್ಲಿ ಮಾಡಲಾದ ಆರೋಪವನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಗೀತಾ ಮಿತ್ತಲ್ ಮತ್ತು ಪಿ.ಎಸ್.ತೇಜಿ ಅವರ ಪೀಠವು, ಇದು ನ್ಯಾಯಾಂಗ ನಿಂದನೆಗೆ ಸಮನಾಗಿದೆ,ಆದರೆ ಕಲಾಪಗಳು ವಿಳಂಬಗೊಳ್ಳುವುದರಿಂದ ನ್ಯಾಯಾಲಯವು ಯಾವದೇ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ಹೇಳಿತು.

ತೇಜಿ ಅವರು ಈ ಹಿಂದೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಕರಣದ ವಿಚಾರಣೆಯನ್ನು ನಡೆಸಿರುವುದರಿಂದ ಅವರು ಈಗ ವಿಚಾರಣೆಯಿಂದ ದೂರವಿರಬೇಕು ಎಂದು ಕುಮಾರ್ ಮತ್ತು ಇತರರು ತಮ್ಮ ಅರ್ಜಿಗಳಲ್ಲಿ ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News