ಆನ್‌ಲೈನ್‌ನಲ್ಲಿ ಸಿಐಸಿಗೆ ದೂರು ಸಲ್ಲಿಕೆ ಸೌಲಭ್ಯ ಶೀಘ್ರ ಆರಂಭ
Update: 2016-11-04 18:38 IST
ಹೊಸದಿಲ್ಲಿ,ನ.4: ಆರ್‌ಟಿಐ ಅರ್ಜಿದಾರರು ತಮ್ಮ ದೂರುಗಳು ಮತ್ತು ಮೇಲ್ಮನವಿ ಗಳನ್ನು ಕೇಂದ್ರೀಯ ಮಾಹಿತಿ ಆಯುಕ್ತ(ಸಿಐಸಿ)ರಿಗೆ ಆನ್‌ಲೈನ್‌ನಲ್ಲಿ ಸಲ್ಲಿಸುವುದು ಶೀಘ್ರವೇ ಸಾಧ್ಯವಾಗಲಿದೆ.
ಗೃಹಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಸಿಐಸಿಯ ಎರಡು ದಿನಗಳ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಲಿದ್ದು, ಇದೇ ವೇಳೆ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ದೂರುಗಳು ಮತ್ತು ಮೇಲ್ಮನವಿಗಳ ತ್ವರಿತ ವಿಲೇವಾರಿಯ ಉದ್ದೇಶದ ‘ಇ-ಕೋರ್ಟ್ ’ವ್ಯವಸ್ಥೆಗೆ ಅವರು ಚಾಲನೆ ನೀಡಲಿದ್ದಾರೆ.
ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಪ್ರಕರಣವೊಂದು ಸಲ್ಲಿಕೆಯಾದ ತಕ್ಷಣ ಅರ್ಜಿದಾರನಿಗೆ ಎಸ್‌ಎಂಎಸ್ ಮತ್ತು ಇ-ಮೇಲ್ ಸೂಚನೆ ರವಾನೆಯಾಗುತ್ತದೆ ಮತ್ತು ವಿಶಿಷ್ಟ ಗುರುತು ಸಂಖ್ಯೆಯೊಂದನ್ನು ನೀಡಲಾಗುತ್ತದೆ. ಆಯೋಗದಲ್ಲಿ ಸಲ್ಲಿಕೆಯಾಗಿರುವ ಪ್ರಕರಣದ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಈ ಸಂಖ್ಯೆಯನು ್ನಬಳಸಬಹುದಾಗಿದೆ ಎಂದು ಸಿಬ್ಬಂದಿ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.