ಮೋದಿ ಚಿತ್ರಗಳಿದ್ದ ಉಡುಪು ಧರಿಸಿದ್ದ ರಾಖಿ ಸಾವಂತ್ ವಿರುದ್ಧ ಎಫ್‌ಐಆರ್

Update: 2016-11-04 13:50 GMT

ಜೈಪುರ,ನ.4: ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳಿದ್ದ ಉಡುಪನ್ನು ಧರಿಸಿದ್ದಕ್ಕಾಗಿ ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸಭ್ಯತೆಗಾಗಿ ಮತ್ತು ಪ್ರಧಾನಿಯವರನ್ನು ಅವಮಾನಿಸಿದ್ದಕ್ಕಾಗಿ ಇಲ್ಲಿಯ ಕಂಕ್ರೋಳಿ ಪೊಲೀಸ್ ಠಾಣೆಯಲ್ಲಿ ರಾಖಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಚಿತ್ರಗಳ ಆಧಾರದಲ್ಲಿ ಸ್ಥಳೀಯ ವಕೀಲ ಪ್ರಜೀತ್ ತಿವಾರಿ ಅವರು ಗುರುವಾರ ಈ ದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕಳೆದ ಆಗಸ್ಟ್‌ನಲ್ಲಿ ತನ್ನ ಅಮೆರಿಕ ಪ್ರವಾಸದ ವೇಳೆ ರಾಖಿ ಧರಿಸಿದ್ದ ಉಡುಪಿನ ಮೇಲೆಲ್ಲ ಮೋದಿಯವರ ಚಿತ್ರಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News