ಎನ್‌ಡಿಟಿವಿ ಪ್ರಸಾರ ನಿಷೇಧ ತುರ್ತು ಪರಿಸ್ಥಿತಿಯಂತಿದೆ: ಮಮತಾ
Update: 2016-11-04 19:36 IST
ಕೋಲ್ಕತಾ, ನ.4: ಎನ್‌ಡಿಟಿವಿ ಇಂಡಿಯಾಕ್ಕೆ ಒಂದು ದಿನದ ಪ್ರಸಾರ ನಿಷೇಧಕ್ಕೆ ಆದೇಶಿಸಿರುವುದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ. ಇದು ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸನ್ನಿವೇಶವಿದೆಯೆಂಬುದನ್ನು ತೋರಿಸಿದೆಯೆಂದು ಅವರು ಆರೋಪಿಸಿದ್ದಾರೆ.
ಎನ್‌ಡಿಟಿವಿಗೆ ನಿಷೇಧ ವಿಧಿಸಿರುವುದು ಆಘಾತಕರ. ಪಠಾಣ್‌ಕೋಟ್ ದಾಳಿಯ ಪ್ರಸಾರದ ಕುರಿತು ಸರಕಾರಕ್ಕೆ ತಕರಾರಿದ್ದರೆ, ಹಲವು ಪ್ರಸ್ತಾವಗಳು ಲಭ್ಯವಿವೆ. ಆದರೆ ನಿಷೇಧವು ತುರ್ತು ಸ್ಥಿತಿಯಂತಹ ವರ್ತನೆಯನ್ನು ತೋರಿಸುತ್ತದೆಯೆಂದು ಮಮತಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.