ಅನಿವಾಸಿ ಭಾರತೀಯರನ್ನು ಮತದಾನಕ್ಕೆ ಉತ್ತೇಜಿಸಲು ಚುನಾವಣಾ ಆಯೋಗದಿಂದ ಕ್ರಮ

Update: 2016-11-04 18:34 GMT

ಹೊಸದಿಲ್ಲಿ, ನ.4: ವಿಶ್ವಾದ್ಯಂತವಿರುವ ಸುಮಾರು 1.14 ಕೋಟಿ ಅನಿವಾಸಿ ಭಾರತೀಯರಲ್ಲಿ ಕೇವಲ 16 ಸಾವಿರ ಜನರಷ್ಟೇ ದೇಶದಲ್ಲಿ ‘ಸಾಗರೋತ್ತರ ಭಾರತೀಯ ಮತದಾರರು’ ಎಂದು ನೋಂದಾಯಿಕೊಂಡಿದ್ದಾರೆ.

ಇನ್ನಷ್ಟು ಅರ್ಹ ಸಾಗರೋತ್ತರ ಭಾರತೀಯರನ್ನು ದೇಶದಲ್ಲಿ ಮತದಾರರೆಂದು ನೋಂದಾಯಿಸಿಕೊಳ್ಳುವಂತೆ ಮಾಡಲು ಚುನಾವಣಾ ಆಯೋಗವೀಗ ಅವರನ್ನು ತಲುಪಲಾರಂಭಿಸಿದೆ.

ತನ್ನ ತಲುಪುವಿಕೆ ಕಾರ್ಯಕ್ರಮದ ಭಾಗವಾಗಿ, ಅನಿವಾಸಿ ಭಾರತೀಯರಲ್ಲಿ ನೋಂದಣಿ ಹಾಗೂ ಮತದಾನದ ಕುರಿತಾಗಿರುವ ಜಾಗೃತಿಯನ್ನು ಅಂದಾಜಿಸಲು ಮತ್ತು ಅವರು ಆಯ್ಕೆ ಮಾಡುವ ಮತದಾನದ ವಿಧಾನದ ಬಗ್ಗೆ ತಿಳಿಯಲು ಆಯೋಗವು ಸಾಗರೋತ್ತರ ಭಾರತೀಯೆ ಆನ್‌ಲೈನ್ ಸಮೀಕ್ಷೆಯೊಂದನ್ನು ಆರಂಭಿಸಿದೆ.

ಈ ಸಮೀಕ್ಷೆಯು ಕೇವಲ ಮಾಹಿತಿಯ ಕಂದರವನ್ನು ಗುರುತಿಸಲು ಮಾತ್ರವಲ್ಲದೆ ಇಚ್ಛಿಸುವ ಮತದಾನ ಪದ್ಧತಿಯ ಕುರಿತಾಗಿ ತಿಳಿಯಲು ಸಹ ಆಯೋಗಕ್ಕೆ ಸಹಾಯ ಮಾಡಲಿದೆ. ಅದನ್ನು ಸರಕಾರ ಹಾಗೂ ಸಂಸತ್ತಿನೊಂದಿಗೆ ಹಂಚಿಕೊಳ್ಳಬಹುದೆನ್ನುವುದು ಅದರ ಅಭಿಪ್ರಾಯವಾಗಿದೆ.

ಗುರಿಯಿರಿಸಿರುವ ಜನರೊಂದಿಗೆ ತೊಡಗಿಸಿಕೊಳ್ಳುವ ಕಾರ್ಯಕ್ರಮದ ಭಾಗವಾಗಿ ಒಂದು ಆನ್‌ಲೈನ್ ಸ್ಪರ್ಧೆಯೂ ಇರುತ್ತದೆ.
ಸಮೀಕ್ಷೆಯು ನವೆಂಬರ್-ಡಿಸೆಂಬರ್‌ನಲ್ಲಿ ನಡೆದರೆ, ಆನ್‌ಲೈನ್ ಸ್ಪರ್ಧಿಯು ತಿಂಗಳ ಕೊನೆಗೆ ಮುಕ್ತಾಯಗೊಳ್ಳಲಿದೆ.

ಸಾಗರೋತ್ತರ ನಾಗರಿಕರು ಎದುರಿಸಬಹುದಾದ ಸವಾಲುಗಳನ್ನು ವ್ಯವಸ್ಥಿತವಾಗಿ ನಿವಾರಿಸಲು ಚುನಾವಣಾ ಆಯೋಗ ಬಯಸಿದೆ. ಅದಕ್ಕಾಗಿ ಆನ್‌ಲೈನ್ ಸಮೀಕ್ಷೆ ನಡೆಸಲಾಗುತ್ತಿದೆ. ಅದರಂತೆ ಮಧ್ಯಪ್ರವೇಶವನ್ನು ವಿನ್ಯಾಸಗೊಳಿಸಲು ಸಾಧ್ಯವಾಗಲಿದೆಯೆಂದು ಮುಖ್ಯ ಚುನಾವಣಾಯುಕ್ತ ನಸೀಂ ಝೈದಿ ಹೇಳಿದ್ದಾರೆ.

‘‘ನಿಮ್ಮ ಧ್ವನಿ ಕೇಳಿಸಲಿ. ನಿಮ್ಮ ಸೃಜನ ಶೀಲತೆಯನ್ನು ಅಭಿವ್ಯಕ್ತಿಸಿರಿ. ಕನಸುಗಳನ್ನು ಸಹ ನಾಗರಿಕರೊಂದಿಗೆ ಹಂಚಿಕೊಳ್ಳಿರಿ’’ ಎಂದು ಅವರು ಕರೆ ನೀಡಿದ್ದಾರೆ.
ವಿದೇಶಗಳಲ್ಲಿರುವ ಭಾರತೀಯ ನಾಗರಿಕರಿಗೆ ಪಾಸ್‌ಪೋರ್ಟ್‌ನಲ್ಲಿ ನಮೂದಿಸಲಾಗಿರುವ ಅವರ ಕ್ಷೇತ್ರದ ಮತದಾರರೆಂದು ನೋಂದಾಯಿಸಲು ಅನುಕೂಲವಾಗುವಂತೆ 1,950 ಜನ ಪ್ರಾತಿನಿಧ್ಯ ಕಾಯ್ದೆಗೆ 2013ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ, ಮತದಾನಕ್ಕಾಗಿ ಭಾರತಕ್ಕೆ ಬರುವುದು ಹಲವರಿಗೆ ಕಷ್ಟವೆನಿಸಿದೆ.

ಸಶಸ್ತ್ರ ಸೇನೆ ಹಾಗೂ ಕೇಂದ್ರೀಯ ಪೊಲೀಸ್ ಸಂಘಟನೆಗಳ ಸಿಬ್ಬಂದಿಯ ಅಂಚೆ ಮತಗಳನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಪಡೆಯಲು ಸರಕಾರ ಕಳೆದ ತಿಂಗಳಷ್ಟೇ ಅನುಮತಿ ನೀಡಿದೆ. ಆದರೆ, ಅನಿವಾಸಿ ಭಾರತೀಯ ಮತದಾರರಿಗಾಗಿ ಇನ್ನಷ್ಟೇ ಆ ಅನುಕೂಲ ಕಲ್ಪಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News