×
Ad

ಭಾರತೀಯ ಐಟಿ ಉದ್ಯಮಕ್ಕೆ ಮತ್ತೆ ಪುಟಿದೇಳುವ ಸಾಮರ್ಥ್ಯವಿದೆ:ಕ್ರಿಸ್

Update: 2016-11-04 20:53 IST

ಹೈದರಾಬಾದ್,ನ.4: ಭಾರತದ ಮಾಹಿತಿ ತಂತ್ರಜ್ಞಾನ(ಐಟಿ) ಉದ್ಯಮವು ಮಂದಗತಿಯ ಈಗಿನ ಹಂತದಿಂದ ಮತ್ತೆ ಪುಟಿದೇಳಲು ಸಮರ್ಥವಾಗಿದೆ ಎಂದು ಇಂದಿಲ್ಲಿ ಹೇಳಿದ ಐಟಿ ಕ್ಷೇತ್ರದ ಹಿರಿಯ ತಲೆ ಕ್ರಿಸ್ ಗೋಪಾಲಕೃಷ್ಣನ್ ಅವರು,ಅದರ ಸುವರ್ಣ ಯುಗ ಮುಗಿದುಹೋಗಿದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ಭಾರತೀಯ ಐಟಿ ಕ್ಷೇತ್ರವು ಚೇತರಿಸಿಕೊಂಡಿದ್ದನ್ನು ನೆನಪಿಸಿದ ಅವರು, ದೇಶದ ಐಟಿ ಕ್ಷೇತ್ರವು ಉದ್ಯೋಗ ಸೃಷ್ಟಿಯಲ್ಲಿ ಅಗ್ರಣಿಯಾಗಿ ಮುಂದುವರಿಯುತ್ತದೆ ಎಂದು ತನಗೆ ತುಂಬು ವಿಶ್ವಾಸವಿದೆ. ಅದು ಬೆಳವಣಿಗೆಯನ್ನು ಮುಂದುವರಿಸಲಿದೆ, ಅದು ಎರಡಂಕಿಗಳ ಬೆಳವಣಿಗೆಯನ್ನು ದಾಖಲಿಸಲಿದೆ ಎಂದರು.

ಬೇರೆ ಯಾವ ಕ್ಷೇತ್ರವು ಉತ್ತಮ ವೇತನ ನೀಡುವ ಒಂದು ಲಕ್ಷ ಅಥವಾ ಎರಡು ಲಕ್ಷ ಉದ್ಯೋಗಗಳನ್ನು ಪ್ರತಿವರ್ಷ ಸೃಷ್ಟಿಸುತ್ತಿದೆ ಎಂದು ಪ್ರಶ್ನಿಸಿದ ಇನ್ಫೋಸಿಸ್‌ನ ಸಹಸ್ಥಾಪಕರೂ ಆಗಿರುವ ಕ್ರಿಸ್, ಭಾರತೀಯ ಐಟಿ ಸೇವೆಗಳ ಸುವರ್ಣ ಯುಗ ಅಂತ್ಯಗೊಂಡಿದೆ ಎಂದು ತಾನು ಹೇಳುವುದಿಲ್ಲ ಎಂದರು
ಕ್ರಿಸ್ 2007-2011 ರ ಅವಧಿಯಲ್ಲಿ ಇನ್ಫೋಸಿಸ್‌ನ ಸಿಇಒ ಮತ್ತು ಎಂಡಿಯಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News