×
Ad

ಜುವೆಲ್ಲರಿ ಅಂಗಡಿಯಿಂದ ಚಿನ್ನ ಕಳವು

Update: 2016-11-04 23:12 IST

ಮಂಗಳೂರು, ಅ.4: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದಿದ್ದ ವ್ಯಕ್ತಿಯೋರ್ವ ಸುಮಾರು 15,000 ರೂ. ವೌಲ್ಯದ ಚಿನ್ನದ ಸರವನ್ನು ಕಳವು ಗೈದಿರುವ ಘಟನೆ ಕಾರ್‌ಸ್ಟ್ರೀಟ್‌ನಲ್ಲಿ ಇಂದು ನಡೆದಿದೆ.

ಅರುಣ್ ಶೇಟ್ ಎಂಬವರಿಗೆ ಸೇರಿದ ಜುವೆಲ್ಲರಿ ಅಂಗಡಿ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿ ಸರವೊಂದನ್ನು ಎಗರಿಸಿದ್ದಾನಲ್ಲದೆ, ಇನ್ನೂ ಕೆಲವು ಚಿನ್ನದ ಕಳವಿಗೆ ಯತ್ನಿಸಿದ್ದಾನೆ. ಈ ಬಗ್ಗೆ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಕಳವು ದಾಖಲಾಗಿದೆ. ಕಳವಿನ ಸಂದರ್ಭದಲ್ಲಿ ಅರುಣ್ ಶೇಟ್ ಹೊರಗಡೆ ಹೋಗಿದ್ದು,ಅವರ ತಂದೆ ಅಂಗಡಿಯಲ್ಲಿದ್ದರು ಎನ್ನಲಾಗಿದೆ. ಎರಡು ತಿಂಗಳ ಹಿಂದಷ್ಟೇ ಅಂಗಡಿ ಉದ್ಘಾಟನೆಗೊಂಡಿತ್ತು.

ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News