ಕುರ್‌ಆನ್ ಸಂದೇಶ ಪ್ರಚಾರದ ಲಾಂಛನ ಬಿಡುಗಡೆ

Update: 2016-11-04 17:54 GMT

ಮಂಗಳೂರು, ನ.4: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಆಶ್ರಯದಲ್ಲಿ ಕುರ್‌ಆನ್ ಸಂದೇಶ ಪ್ರಚಾರದ ಲಾಂಛನ ಬಿಡುಗಡೆ
ಸಂದೇಶ ಪ್ರಚಾರ ಅಭಿಯಾನದ ಲಾಂಛನ ಬಿಡುಗಡೆ ಸಮಾರಂಭ ನಗರದ ದಾರುಲ್ ಖೈರ್ನಲ್ಲಿ ಶುಕ್ರವಾರ ನಡೆಯಿತು.

ಮೌಲಾನ ಅಬ್ದುಲ್ ಜಬ್ಬಾರ್ ಫೈಝಿ ಲಾಂಛನವನ್ನು ಉದ್ಯಮಿ ರಿಯಾಝ್ ಬಾವ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಭಿತ್ತಿಪತ್ರ ಮತ್ತು ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಪವಿತ್ರ ಕುರ್‌ಆನ್ ಪ್ರಾರ್ಥನೆಗೆ ಮಾತ್ರ ಸೀಮಿತ ಗ್ರಂಥವಾಗಿರದೆ? ಮನುಷ್ಯರ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಲೋಕದ ಅಂತ್ಯದ ವರೆಗೂ ಮಾರ್ಗದರ್ಶನ ನೀಡಲಿದೆ ಎಂದು ಮೌಲಾನ ಅಬ್ದುಲ್ ಜಬ್ಬಾರ್ ಫೈಝಿ ಹೇಳಿದರು.

ಕುರ್‌ಆನನ್ನು ಓದಿ ಅರ್ಥ ಮಾಡಿಕೊಂಡು ಇನ್ನೊಬ್ಬರಿಗೆ ತಲುಪಿಸುವುದು ಪ್ರತಿಯೊಬ್ಬ ಮುಸಲ್ಮಾನನ ಜವಾಬ್ದಾರಿ. ಕುರ್‌ಆನನ್ನು ಪ್ರವಾದಿ ಮುಹಮ್ಮದ್ ಅವರ ಹದೀಸ್‌ನೊಂದಿಗೆ ಅಧ್ಯಯನ ಮಾಡಿದರೆ ಮಾತ್ರ ಪರಿಪೂರ್ಣ ಜ್ಞಾನ ಲಭಿಸುತ್ತದೆ ಎಂದು ಅವರು ಹೇಳಿದರು.

ಎಸ್‌ಕೆಎಸ್‌ಎಂ ಅಧ್ಯಕ್ಷ ಅಬೂಬಕರ್ ಪಾಂಡೇಶ್ವರ ಅಧ್ಯಕ್ಷತೆ ವಹಿಸಿದ್ದರು. ಅಲ್‌ಹಖ್ ಫೌಂಡೇಶನ್‌ನ ಅಧ್ಯಕ್ಷ ಬಿ.ಎಸ್.ಇಮ್ತಿಯಾಝ್, ಜಿದ್ದಾದ ಅಬ್ದುಲ್ ಖಯ್ಯೂಮ್ ಉಪಸ್ಥಿತರಿದ್ದರು. ಇಂಝಾಮ್ ಮತ್ತು ಮುಝಮ್ಮಿಲ್ ಕಿರಾಅತ್ ಪಠಿಸಿದರು. ಮೂಸಾ ಫಾಝಿಲ್ ಸ್ವಾಗತಿಸಿದರು.

ಎಸ್‌ಕೆಎಸ್‌ಎಂ ಕಾರ್ಯದರ್ಶಿ ಎಂ.ಜಿ.ಮುಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಯಾನ ಸ್ವಾಗತ ಸಮಿತಿ ಅಧ್ಯಕ್ಷ ಅಹ್ಮದ್ ಅನ್ಸಾರ್ ವಂದಿಸಿದರು. ಶರೀಫ್ ಮುಲ್ಕಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News