×
Ad

ನಾಳೆ ದೀಪಾವಳಿ ಸೌಹಾರ್ದ ಕೂಟ

Update: 2016-11-04 23:45 IST

 ಮಂಗಳೂರು, ನ.4: ನಗರದ ಸದ್ಭಾವನಾ ವೇದಿಕೆ ಜಪ್ಪು ವರ್ತುಲ ವತಿಯಿಂದ ನಗರದ ಮೋರ್ಗನ್ಸ್ ಗೇಟ್ ರಾಮಕ್ಷತ್ರಿಯ ಮಂದಿರದಲ್ಲಿ ನ. 6ರಂದು ಸಂಜೆ 6:30ಕ್ಕೆ ದೀಪಾವಳಿ ಸೌಹಾರ್ದ ಕೂಟವನ್ನು ಆಯೋಜಿಸಲಾಗಿದೆ.
   ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ಡೇನಿಸ್ ರೊಡ್ರಿಗಸ್, ಪತ್ರಕರ್ತ ಮನೋಹರ ಪ್ರಸಾದ್ ಮತ್ತು ಕರ್ನಾಟಕ ಜಮಾಅತ್ ಇಸ್ಲಾಮೀ ಹಿಂದ್‌ನ ಸಲಹಾ ಸಮಿತಿಯ ಸದಸ್ಯ ಅಕ್ಬರ್ ಅಲಿ ಭಾಗವಹಿಸಲಿದ್ದಾರೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News