×
Ad

ಮೃಗೀಯ ವರ್ತನೆ ಎಂದರೆ ಇದೆಯೇ ?

Update: 2016-11-05 13:31 IST

ಪುಣೆ, ನ.5: ಬೀದಿ ನಾಯಿಯೊಂದನ್ನು ಐದು ಮಂದಿ ಯುವಕರು ತಮ್ಮ ಮೊಟಾರ್ ಸೈಕಲುಗಳಿಗೆ ಕಟ್ಟಿ ಅವುಗಳನ್ನು ಸುಮಾರು ಎರಡು ಕಿ.ಮೀ. ದೂರದವರೆಗೆ ಎಳೆದುಕೊಂಡು ಹೋದ ಘಟನೆ ಸುಸ್ ಗ್ರಾಮದಿಂದ ವರದಿಯಾಗಿದೆ. ಈ ಘಟನೆಗೆ ಸಾಕ್ಷಿಯಾದ ಇಬ್ಬರು ಮಹಿಳಾ ಸಾಫ್ಟ್ ವೇರ್ ಇಂಜಿನಿಯರರು ಪ್ರಾಣಿ ದಯಾ ಕಾರ್ಯಕರ್ತರಾದ ಅನ್ಸನ್ ಪಲಕ್ಕಲ್ ಅವರಿಗೆ ಮಾಹಿತಿ ನೀಡಿದ ನಂತರ ಅನ್ಸನ್ ಪೊಲೀಸ್ ದೂರು ನೀಡಿದ್ದು ಹಿಂಜೇವಾಡಿ ಪೊಲೀಸರು ಐದು ಮಂದಿ ಯುವಕರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯಿದೆಯನ್ವಯ ದೂರು ದಾಖಲಿಸಿದ್ದಾರೆ.

ಬಿಳಿ ಬಣ್ಣದ ನಾಯಿಯೊಂದಕ್ಕೆಆ ಯುವಕರು ಮೊದಲುದೊಣ್ಣೆಗಳಿಂದ ಹೊಡೆದ ಪರಿಣಾಮ ಅದು ತೀವ್ರ ರಕ್ತಸ್ರಾವಕ್ಕೀಡಾಗಿ ಸ್ಮತಿ ಕಳೆದುಕೊಂಡಿತ್ತು. ನಂತರ ಅವರು ನೈಲಾನ್ ಹಗ್ಗವನ್ನು ನಾಯಿಯ ಕುತ್ತಿಗೆಗೆ ಬಿಗಿದು ಅದನ್ನು ತಮ್ಮ ಒಂದು ಮೊಟಾರ್ ಸೈಕಲ್ಲಿಗೆ ಕಟ್ಟಿ ಎರಡು ಕಿಮೀ ದೂರದ ತನಕ ಅದನ್ನು ಎಳೆದುಕೊಂಡು ಹೋಗಿದ್ದರು. ಅಷ್ಟರೊಳಗಾಗಿ ನಾಯಿ ಸತ್ತಿತ್ತು.

ಯುವಕರು ನಾಯಿಯನ್ನು ಈ ರೀತಿ ಅಮಾನುಷವಾಗಿ ಹತ್ಯೆಗೈಯ್ಯಲು ಕಾರಣವೇನು ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ನಾಯಿಗೆ ಹೊಡೆದ ಬೆತ್ತಗಳು ಸ್ಥಳದಲ್ಲಿ ಪತ್ತೆಂಾಗಿವೆ ಎಂದು ಅನ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News