×
Ad

ಮಿನಿಬಸ್‌ಗೆ ಲಾರಿ ಡಿಕ್ಕಿ:14 ಯಾತ್ರಿಕರ ಸಾವು

Update: 2016-11-05 14:16 IST

ಅಹ್ಮದಾಬಾದ್,ನ.5: ಅಹ್ಮದಾಬಾದ್ ಜಿಲ್ಲೆಯ ವಲ್ತೇರಾ ಪಾಟಿಯಾ ಎಂಬಲ್ಲಿ ಕಳೆದ ರಾತ್ರಿ ಲಾರಿಯೊಂದು ಮಿನಿಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ 14 ಯಾತ್ರಿಕರು ಸ್ಥಳ ದಲ್ಲಿಯೇ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.

ಬಸ್‌ನಲ್ಲಿ 17 ಯಾತ್ರಿಕರಿದ್ದು, ಗುಜರಾತಿನ ಪಂಚಮಹಲ್ಸ್ ಜಿಲ್ಲೆಯಲ್ಲಿನ ಪಾವಗಡ ಕ್ಷೇತ್ರದಿಂದ ತಮ್ಮೂರಾದ ರಾಜಕೋಟ್ ಜಿಲ್ಲೆಯ ಸೋಖ್ಡಾಕ್ಕೆ ಮರಳುತ್ತಿದ್ದಾಗ ಧೋಲ್ಕಾ-ಬಗೋದರಾ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಅಪಘಾತವೆಸಗಿದ ಲಾರಿ ಸ್ಥಳದಿಂದ ಪರಾರಿಯಾಗಿದೆ. ಗಾಯಾಳುಗಳನ್ನು ಅಹ್ಮದಾಬಾದಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿವೈಎಸ್‌ಪಿ ಎಚ್.ಜೆ.ಪರಮಾರ್ ತಿಳಿಸಿದರು.

ಮೃತರ ಗೌರವಾರ್ಥ ಸೋಖ್ಡಾ ಪಟ್ಟಣದಲ್ಲಿ ಇಂದು ಬಂದ್ ಆಚರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News