×
Ad

ಖಾಸಗಿ ಹಣಕಾಸು ಸಂಸ್ಥೆಯ ಕಾನೂನು ಸಲಹೆಗಾರನ ಹತ್ಯೆ

Update: 2016-11-05 14:21 IST

ಹಾಜಿಪುರ(ಬಿಹಾರ),ನ.5: ವೈಶಾಲಿ ಜಿಲ್ಲೆಯ ಹಾಜಿಪುರದ ರಾಮಭದ್ರ ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ಖಾಸಗಿ ಹಣಕಾಸು ಸಂಸ್ಥೆಯ ಕಾನೂನು ಸಲಹೆಗಾರ ರೋರ್ವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಕೋಟಕ್ ಮಹೀಂದ್ರ ಫೈನಾನ್ಸ್ ಕಂಪನಿಯಲ್ಲಿ ಕಾನೂನು ಸಲಹೆಗಾರರಾಗಿದ್ದ ಪಂಕಜ ಕುಮಾರ್ ಅವರು ಪಟ್ನಾದಲ್ಲಿ ತನ್ನ ಕರ್ತವ್ಯ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದಾಗ ಅವರ ಹತ್ಯೆ ನಡೆದಿದೆ. ಹತ್ಯೆಯ ಕಾರಣವಿನ್ನೂ ಗೊತ್ತಾಗಿಲ್ಲ ಎಂದು ಎಸ್‌ಪಿ ರಾಕೇಶ ಕುಮಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News