×
Ad

ಎಂಡೋ ಸಂತ್ರಸ್ತರ ಹೃದಯವಿದ್ರಾವಕ ಬದುಕು ತೆರೆದಿಡುವ ಸಾಕ್ಷಚಿತ್ರ ‘ಅರಿಕು ಜೀವಿತಗಳ್’

Update: 2016-11-05 15:54 IST

ಕಾಸರಗೋಡು, ನ.5: ಸ್ಮೈಲ್ ವಾಟ್ಸಪ್ ಗ್ರೂಪ್‌ನ ಬ್ಯಾನರ್‌ನಡಿ ನಿರ್ಮಾಣಗೊಂಡ ಎಂಡೋಸಲ್ಫಾನ್ ಸಂತ್ರಸ್ತರ ಕುರಿತ ಸಾಕ್ಷಚಿತ್ರ ‘ಅರಿಕು ಜೀವಿತಗಳ್-ಎ ರಿಯಲ್ ಲ್ೈ ಆ್ ಎಂಡೋಸಲ್ಫಾನ್ ವಿಕ್ಟೀಮ್ಸ್’ ಪ್ರದರ್ಶನಕ್ಕೆ ಚಾಲನೆ ದೊರೆಯಿುತು. ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ನಡೆದ ಮೊದಲ ಪ್ರದರ್ಶನವನ್ನು ಪ್ರೆಸ್‌ಕ್ಲಬ್ ಕಾರ್ಯದರ್ಶಿ ರವೀಂದ್ರನ್ ರಾವಣೇಶ್ವರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದಶಕಗಳ ಹಿಂದೆ ಮಹಾಮಾರಿ ಎಂಡೋಸಲ್ಫಾನ್‌ನ್ನು ಸಿಂಪಡಿಸುವ ವೇಳೆ ವ್ಯಾಪ್ತಿ ಗುರುತಿಸಲಿಲ್ಲ. ಮುಂದಾಲೋಚನೆಯಿಲ್ಲದೆ ಪ್ಲಾಂಟೇಶನ್ ಕಾರ್ಪೊರೇಶನ್‌ನ ಗೇರುತೋಟಕ್ಕೆ ಆ ಮಾರಕ ಕೀಟನಾಶಕವನ್ನು ಸಿಂಪಡಿಸಿತು. ಅದರೆ ಇದು ಗಾಳಿ ಮೂಲಕ ನಿಗದಿತ ಪ್ರದೇಶ ವ್ಯಾಪ್ತಿಯ ಹೊರ ಪ್ರದೇಶಗಳಿಗೂ ದುಷ್ಪರಿಣಾಮ ಬೀರುವ ಬಗ್ಗೆ ಸ್ಪಷ್ಟ ಅರಿವು ಇವರಿಗೆ ಇರಲಿಲ್ಲ. ಬಳಿಕ ಇದು ತಿಳಿದಿದ್ದರೂ ಜಿಲ್ಲೆಯ ಹನ್ನೊಂದು ಪಂಚಾಯತ್‌ಗಳನ್ನು ಮಾತ್ರವೇ ಎಂಡೋ ಸಂತ್ರಸ್ತ ಎಂದು ಘೋಷಿಸಲಾಗಿದೆ. ಉಳಿದ ಪ್ರದೇಶಗಳಲ್ಲಿರುವ ಎಂಡೋ ಸಂತ್ರಸ್ತರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ವರ್ಷಗಳಿಂದ ಹೋರಾಟಗಳು ನಡೆಯುತ್ತಲೇ ಇವೆ. ಆದರೆ ಸರಕಾರ ಇನ್ನೂ ವೌನವಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಸ್ಮೈಲ್ ವಾಟ್ಸಪ್ ಗ್ರೂಪ್ ನಿರ್ಮಿಸಿರುವ ಎಂಡೋ ಸಂತ್ರಸ್ತರ ಹೃದಯ ವಿದ್ರಾವಕ ಜೀವನವನ್ನು ತೆರೆದಿಡುವ ‘ಅರಿಕು ಜೀವಿತಗಳ್’ ಶ್ಲಾಘನೀಯ ಪ್ರಯತ್ನ ಎಂದರು.

ಸ್ಮೈಲ್ ವಾಟ್ಸಪ್ ಗ್ರೂಪ್‌ನ ಬ್ಯಾನರ್‌ನಲ್ಲಿ ನಿರ್ಮಾಣಗೊಂಡ ಸಾಕ್ಷ್ಯಚಿತ್ರ ದ ಟ್ರೈಲರ್ ಸಾಮಾಜಿಕ ತಾಣಗಳ ಮೂಲಕ ಜನಮೆಚ್ಚುಗೆ ಪಡೆದುಕೊಂಡಿತ್ತು. ಸ್ಮೈಲ್ ವಾಟ್ಸಪ್ ಗ್ರೂಪ್‌ನ ಸದಸ್ಯರು ಸಾಕ್ಷ್ಯ ಚಿತ್ರದ ರೂವಾರಿಗಳಾಗಿದ್ದಾರೆ. 30 ನಿಮಿಷಗಳ ಸಾಕ್ಷ್ಯಚಿತ್ರದ ಆರಂಭದಿಂದ ಕೊನೆವರೆಗೂ ಕೇಳಿಸುವ ನೋವಿನ ಸಂಗೀತ ಜನಸಾಮಾನ್ಯರ ಹೃದಯವನ್ನು ತೆರೆಯುತ್ತದೆ. ವಿವಿಧ ಕಾರಣಗಳಿಂದಾಗಿ ಸೌಲಭ್ಯಗಳಿಂದ ವಂಚಿತರಾದ ಸಾವಿರಾರು ಎಂಡೋ ಸಂತ್ರಸ್ತರು ಜಿಲ್ಲೆಯ ಹಲವು ಪಂಚಾಯತ್ ವ್ಯಾಪ್ತಿಗಳಲ್ಲಿದ್ದಾರೆ. ಅವರೆಲ್ಲ ಜೀವನ ದುರಂತಗಳನ್ನು ಸಾಕ್ಷ್ಯಚಿತ್ರದಲ್ಲಿ ತುಂಬಿಸುವುದು ಅಸಾಧ್ಯ. ಅವರೆಲ್ಲರ ಪ್ರತಿನಿಧಿಯಾಗಿ ಐವರ ಬದುಕನ್ನು ಸಾಕ್ಷ್ಯಚಿತ್ರದಲ್ಲಿ ತೆರೆದಿಡಲಾಗಿದೆ. ಎಂಡೋಸಲ್ಫಾನ್ ಹೋರಾಟ ಸಮಿತಿಯು ಈ ಸಾಕ್ಷ್ಯಚಿತ್ರವನ್ನು ಒಂದು ಮನವಿಯಾಗಿ ಪರಿಗಣಿಸಿ ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದೆ ಎಂದು ಸಾಕ್ಷಚಿತ್ರ ನಿರ್ದೇಶಕ ಚಂದ್ರು ವೆಳ್ಳರಿಕುಂಡು ಹೇಳಿದ್ದಾರೆ.

ಮೊದಲ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಚಂದ್ರು ವೆಳ್ಳರಿಕುಮಡು, ರತೀಶ್ ಅಂಬಲತ್ತರ, ನಾರಾಯಣನ್, ಸಂತೋಷ್ ಒಡಯಂಚಾಲ್, ಕುಂಞಿಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News