ಕೇಂದ್ರದ ವಿರುದ್ಧ ರವೀಶ್ ಕುಮಾರ್ ಟಾಪ್ ಟ್ರೆಂಡಿಂಗ್

Update: 2016-11-05 11:39 GMT

ಹೊಸದಿಲ್ಲಿ : ಎನ್ ಡಿ ಟಿ ವಿ ಹಿಂದಿ ಚಾನಲ್ಲಿನ ಹಿರಿಯ ಆ್ಯಂಕರ್ ರವೀಶ್ ಕುಮಾರ್ ಅವರು ಟ್ವಿಟ್ಟರಿನಲ್ಲಿ ಟ್ರೆಂಡಿಂಗ್ ಆಗಿ ಬಿಟ್ಟಿದ್ದಾರೆ. ಏಕಂತೀರಾ ? ನವೆಂಬರ್ 4 ರಂದು ಅವರು ಪ್ರೈಮ್ ಟೈಮ್ ಕಾರ್ಯಕ್ರಮದಲ್ಲಿ ರಾಜಕೀಯ ನೇತಾರರನ್ನು ಬಿಟ್ಟು ಇಬ್ಬರು ಮೂಕ ಕಲಾವಿದರೊಂದಿಗೆ ಚರ್ಚೆ ನಡೆಸಿರುವುದೇ ಇದಕ್ಕೆ ಕಾರಣ. ಎನ್ ಡಿ ಟಿ ವಿ ಹಿಂದಿ ಚಾನೆಲ್ಲಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಪಠಾಣ್ ಕೋಟ್ ದಾಳಿ ಸಂಬಂಧದ ವರದಿಯಲ್ಲಿ ಕೆಲವು ಗೌಪ್ಯ ವಿಚಾರಗಳನ್ನು ಬಹಿರಂಗ ಪಡಿಸಿದ್ದರ ವಿರುದ್ಧ ವಿಧಿಸಿರುವ ಒಂದು ದಿನದ ನಿಷೇಧ ವಿರೋಧಿಸಿಈ ಮೂಕ ಕಲಾವಿದರೊಂದಿಗಿನ ಚರ್ಚಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದರ ಫಲವಾಗಿ ರವೀಶ್‌ಕುಮಾರ್ ಟ್ವಿಟ್ಟರಿನಲ್ಲಿ ಟ್ರೆಂಡಿಂಗ್ ಆಗಿ ಬಿಟಿದ್ದರು. ಈ ಶೋದಲ್ಲಿ ರವೀಶ್ ಅವರು ತಮ್ಮ ವಾದ ಮಂಡನೆ ಮಾಡುತ್ತಿದ್ದಂತೆಯೇ ಈ ಮೂಕ ಕಲಾವಿದರು ತಮ್ಮದೇ ಸಂಜ್ಞೆಯ ಭಾಷೆಯಲ್ಲಿರಾಜಕಾರಣಿಗಳನ್ನು ಗುರಿಯಾಗಿಸಿದ್ದರು.

ಕಾರ್ಯಕ್ರಮದ ನಂತರ ರವೀಶ್ ಅವರನ್ನು ಟ್ವಿಟ್ಟರಿನಲ್ಲಿ ಹಲವರು ಹೊಗಳಿದ್ದಾರೆ. ಒಬ್ಬರು ರವೀಶ್ ಅವರನ್ನು ಹೊಗಳುತ್ತಾ ‘‘ಏಕ್ ಬಿಹಾರಿ, ಸಬ್ ಪೆ ಭಾರಿ’’ ಎಂದು ಬರೆದಿದ್ದರೆ ಇನ್ನೊಬ್ಬರು ಕೆಲವೊಮ್ಮೆ ಮೌನಬೊಬ್ಬೆಗಿಂತ ಹೆಚ್ಚು ಶಬ್ದ ಮಾಡುತ್ತದೆ ಎಂದು ಬರೆದಿದ್ದಾರೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆದೇಶದ ವಿಚಾರದಲ್ಲಿ ಎನ್ ಡಿ ಟಿ ವಿ ಆಶ್ಚರ್ಯ ವ್ಯಕ್ತ ಪಡಿಸಿದ್ದು ಕೇಂದ್ರ ಈ ಚಾನೆಲನ್ನು ಈ ಪರಿಯಾಗಿ ಆಯ್ಕೆ ಮಾಡುವುದು ಎಂದು ತಾವಂದುಕೊಂಡಿರಲೇ ಇಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News