ಉಡುಪಿ: ನರ್ಮ್ ಬಸ್ ಸೌಲಭ್ಯ ಕಲ್ಪಿಸುವಂತೆ ಉಸ್ತುವಾರಿ ಸಚಿವರಿಗೆ ಮನವಿ
ಉಡುಪಿ, ನ.5: ನರ್ಮ್ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಉಡುಪಿಯ ಬ್ರಹ್ಮಗಿರಿ ನಾಯರ್‌ಕೆರೆ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ಗೆ ಮನವಿ ಸಲ್ಲಿಸಿದ್ದಾರೆ.
ಉಡುಪಿ -ಕಿನ್ನಿಮುಲ್ಕಿ- ಬ್ರಹ್ಮಗಿರಿ- ಬನ್ನಂಜೆ ತಾಲೂಕು ಕಚೇರಿ- ಆದಿ ಉಡುಪಿ ಮಾರುಕಟ್ಟೆ- ಮೂಡಬೆಟ್ಟು- ಕೊಡವೂರು ಮೂಲಕ ಮಲ್ಪೆ ಬೀಚ್ ಮಾರ್ಗಕ್ಕೆ ನರ್ಮ್ ನಗರ ಸಾರಿಗೆಯ ಎರಡು ಬಸ್‌ಗಳನ್ನ ಓಡಿಸಬೇಕು. ಸಾಕಷ್ಟು ಜನಸಂದಣಿ ಇರುವ ಈ ವಸತಿ ಪ್ರದೇಶದಲ್ಲಿ ಈವರೆಗೆ ಯಾವುದೇ ಸಿಟಿಬಸ್‌ಗಳು ಸಂಚರಿಸುತ್ತಿಲ್ಲ. ಇದರಿಂದ ಸ್ಥಳೀಯ ಶಾಲಾ ಮಕ್ಕಳು, ಹಿರಿಯ ನಾಗರಿಕರಿಗೆ ನಿರ್ದಿಷ್ಟ ಸ್ಥಳಗಳಾದ ಅಗ್ನಿಶಾಮಕ ದಳ ಕಚೇರಿ, ನಾಯರ್‌ಕೆರೆ ಹಾಶ್ಮಿ ಮಸೀದಿ, ಕಾಂಗ್ರೆಸ್ ಭವನ, ತಾಲೂಕು ಕಚೇರಿ, ಬನ್ನಂಜೆ ದೇವಸ್ಥಾನ, ವಡಬಂಡೇಶ್ವರ ದೇವಸ್ಥಾನ ಮತ್ತು ಮಲ್ಪೆ ಬೀಚ್‌ಗೆ ತೆರಳಲು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಎಂ.ಇಕ್ಬಾಲ್ ಮನ್ನಾ, ರವಿರಾಜ್, ಸದಾನಂದ ಹೆಗ್ಡೆ, ಬಶೀರ್ ಮನ್ನಾ ಉಪಸ್ಥಿತರಿದ್ದರು.