ಎನ್‌ಡಿಟಿವಿಗೆ ನಿಷೇಧ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ: ಮುಸ್ಲಿಂ ಲೇಖಕರ ಸಂಘ

Update: 2016-11-05 13:38 GMT

ಮಂಗಳೂರು, ನ.5: ಕೇಂದ್ರ ಸರಕಾರವು ಎನ್‌ಡಿಟಿವಿ ಸುದ್ದಿವಾಹಿನಿಯ ಮೇಲೆ ಒಂದು ದಿನದ ನಿರ್ಬಂಧ ಹೇರಿರುವುದನ್ನು ಮುಸ್ಲಿಮ್ ಲೇಖಕರ ಸಂಘವು ತೀವ್ರವಾಗಿ ಖಂಡಿಸಿದೆ.

ಪ್ರಜಾಪ್ರಭುತ್ವದ ನಾಲ್ಕನೆ ಅಂಗವೆಂದೇ ಹೇಳಲಾಗುತ್ತಿರುವ ಮಾಧ್ಯಮ ರಂಗದ ವಿರುದ್ಧ ಕೇಂದ್ರ ಸರಕಾರವು ಸರ್ವಾಧಿಕಾರಿ ಧೋರಣೆ ತೋರುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೆ ಯತ್ನಿಸುತ್ತಿದೆ. ದೇಶದಲ್ಲಿಂದು ನಡೆಯುತ್ತಿರುವ ಹಲವು ಘಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುತ್ತಿವೆ. ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಪ್ರಜ್ಞಾವಂತ ನಾಗರಿಕರೆಲ್ಲರೂ ಎಚ್ಚೆತ್ತು ನಮ್ಮ ಸಂವಿಧಾನದ ಆಶಯಗಳ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News