×
Ad

ಕಾಶ್ಮೀರ: ಪಾಕ್‌ನಿಂದ ತಣ್ಣಗಿನ ಪ್ರತಿಕ್ರಿಯೆ : ಜೆಯುಡಿ ವರಿಷ್ಠ ಹಾಫೀಜ್ ಸಯೀದ್ ಟೀಕೆ

Update: 2016-11-05 20:49 IST

ಲಾಹೋರ್,ನ.5: ಕಾಶ್ಮೀರದಲ್ಲಿ ಭಾರತವು ಜನತೆಯ ಮೇಲೆ ದೌರ್ಜನ್ಯಗಳನ್ನು ಎಸಗು ತ್ತಿದ್ದರೂ ನವಾಝ್ ಶರೀಫ್ ಸರಕಾರವು ಭಾರತಕ್ಕೆ ‘ತಣ್ಣಗೆಯ’ ಪ್ರತಿಕ್ರಿಯೆಯನ್ನು ನೀಡುತ್ತಿದೆ ಎಂದು ಜಮಾತುದ್ದವಾ ಉಗ್ರಗಾಮಿ ಸಂಘಟನೆಯ ವರಿಷ್ಠ ಹಾಗೂ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಸೂತ್ರಧಾರಿಯೆನ್ನಲಾದ ಹಾಫೀಝ್ ಸಯೀದ್ ಟೀಕಿಸಿದ್ದಾನೆೆ. ಕಾಶ್ಮೀರ ಕಣಿವೆಯ ಜನತೆಯ ಹೋರಾಟಕ್ಕೆ ಪಾಕಿಸ್ತಾನದಿಂದ ಸಂಪೂರ್ಣ ಕಾರ್ಯರೂಪದ ಬೆಂಬಲದ ಅಗತ್ಯವಿದೆಯೆಂದು ಆತ ಹೇಳಿದ್ದಾನೆ.

ಲಾಹೋರ್‌ನಲ್ಲಿರುವ ಜೆಡಿಯುನ ಮುಖ್ಯ ಕಾರ್ಯಾಲಯ ‘ಮಸ್ಜಿದೆ ಖಾದಿಸಾ’ದ ಲ್ಲಿ ಶುಕ್ರವಾರದ ಪ್ರವಚನ ನೀಡುತ್ತಿದ್ದ ಸಂದರ್ಭದಲ್ಲಿ ಆತ ಪಾಕ್ ಸರಕಾರವನ್ನು ಟೀಕಿಸಿದ್ದಾನೆ. ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಸಂಬಂಧಿಸಿ ಪಾಕಿಸ್ತಾನ ಸರಕಾರವು ತಣ್ಣಗೆ ಪ್ರತಿಕ್ರಿಯಿಸುತ್ತಿದೆ. ಈ ರೀತಿ ವರ್ತಿಸುವ ಮೂಲಕ ಅದು ದಮನಕ್ಕೊಳಗಾದ ಕಾಶ್ಮೀರಿಗಳ ಅಹವಾಲುಗಳಿಗೆ ಕಿವಿಗೊಡುತ್ತಿಲ್ಲವೆಂದು ಸಯೀದ್ ಆರೋಪಿಸಿದ್ದಾನೆ.

 ಪಾಕ್ ಪ್ರಧಾನಿ ನವಾಝ್ ಶರೀಫ್ ಹಾಗೂ ಅವರ ಸರಕಾರದ ಇತರ ಸದಸ್ಯರು ಕಾಶ್ಮೀರಿಗಳ ಪರವಾಗಿ ಒಂದೆರಡು ಹೇಳಿಕೆ ನೀಡಿ, ಸುಮ್ಮನಾದರೆ ಅದಕ್ಕೆ ಯಾವುದೇ ಬೆಲೆಯಿಲ್ಲ. ಕಾಶ್ಮೀರಿಗಳಿಗೆ ಅವರ ಕಾರ್ಯರೂಪದ ಬೆಂಬಲದ ಅಗತ್ಯವಿದೆಯೆಂದು ಸಯೀದ್ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News