ಹಿ.ಪ್ರದೇಶ: ಬಸ್ ಪ್ರಪಾತಕ್ಕುರುಳಿ 16 ಸಾವು ,28ಜನರಿಗೆ ಗಾಯ
Update: 2016-11-05 21:20 IST
ಶಿಮ್ಲಾ,ನ.5: ಹಿಮಾಚಲ ಪ್ರದೇಶದ ಮಂಡಿ ಪಟ್ಟಣದ ಸಮೀಪ ಶನಿವಾರ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಖಾಸಗಿ ಬಸ್ಸೊಂದು ರಸ್ತೆಬದಿಯ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 28 ಜನರು ಗಾಯಗೊಂಡಿ ದ್ದಾರೆ.
ಮಂಡಿಯಿಂದ ಕುಲು ಪಟ್ಟಣಕ್ಕೆ ತೆರಳುತ್ತಿದ್ದ ಈ ನತದೃಷ್ಟ ಬಸ್ ಬೃಂದಾವನಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ. ಗಾಯಾಳುಗಳನ್ನು ಮಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎಸ್‌ಪಿ ಕುಲಭೂಷಣ್ ಅವರು ತಿಳಿಸಿದರು.
ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರವನ್ನು ವಿತರಿಸಲಾಗುವುದು ಮತ್ತು ಗಾಯಾಳುಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು ಎಂದು ರಾಜ್ಯದ ಸಾರಿಗೆ ಸಚಿವ ಜಿ.ಎಸ್.ಬಾಲಿ ತಿಳಿಸಿದರು.