×
Ad

ಪಾಕ್ ಪತ್ನಿಗೆ ವೀಸಾ: ಸ್ಪಂದಿಸಿದ ಸುಷ್ಮಾ

Update: 2016-11-05 22:46 IST

ಹೊಸದಿಲ್ಲಿ, ನ.5: ನಿಮ್ಮ ಪಾಕಿಸ್ತಾನೀ ಪತ್ನಿಗೆ ಭಾರತೀಯ ವೀಸಾ ಪಡೆಯಲು ನೀವು ಎಲ್ಲಿ ಅರ್ಜಿ ಸಲ್ಲಿಸಿರುವುದು..? ಹೀಗೆಂದು ಪ್ರಶ್ನಿಸಿದವರು ಭಾರತದ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್. ದುಬೈಯಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆ ಯಾಸಿನ್ ಎಂಬವರು ಸೆಪ್ಟಂಬರ್‌ನಲ್ಲಿ ತನ್ನ ವಿಶೇಷ ಚೇತನ ಮಗು (ವಿಕಲಾಂಗ ಮಗು)ವಿಗೆ ಮುಂಬೈಯಲ್ಲಿ ಚಿಕಿತ್ಸೆ ನೀಡಲು ಉದ್ದೇಶಿಸಿದ್ದರು. ಇವರ ಪತ್ನಿ ಪಾಕಿಸ್ತಾನ ಮೂಲದವಳು. ವೀಸಾ ಪ್ರಕ್ರಿಯೆ ತುರ್ತಾಗಿ ನಡೆಯಲೆಂಬ ಉದ್ದೇಶದಿಂದ ಯಾಸಿನ್ ಭಾರತದ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟ್ವಿಟರ್‌ನಲ್ಲಿ ಸಂಪರ್ಕಿಸಿ - ಮುಂಬೈಯಲ್ಲಿ ನನ್ನ ಮಗುವಿಗೆ ಚಿಕಿತ್ಸೆ ನೀಡುವ ಸಂದರ್ಭ ಉಪಸ್ಥಿತರಿರಲು ಪಾಕಿಸ್ತಾನ ಮೂಲದ ನನ್ನ ಪತ್ನಿಗೆ ವೈದ್ಯಕೀಯ ಚಾಕರಿ ವೀಸಾ ಒದಗಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಇದಕ್ಕೆ ತಕ್ಷಣ ಸ್ಪಂದಿಸಿದ ಸುಷ್ಮಾ, ಈ ಮೇಲಿನಂತೆ ಪ್ರಶ್ನಿಸಿದ್ದರು ಎಂದು ಯಾಸಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News