×
Ad

ಸರ ಕಸಿದು ಪರಾರಿ

Update: 2016-11-05 23:02 IST

ಮಂಗಳೂರು, ನ. 5: ನಗರದ ಮಣ್ಣಗುಡ್ಡೆ ಸಮೀಪ ಶನಿವಾರ ಮುಂಜಾನೆ ದ್ವಿಚಕ್ರದಲ್ಲಿ ಆಗಮಿಸಿದ ಅಪರಿಚಿತ ದುಷ್ಕರ್ಮಿಗಳು ಮಹಿಳೆಯೋರ್ವರ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ.

ಇಂದು ಮುಂಜಾನೆ 9 ಗಂಟೆ ಸುಮಾರಿಗೆ ಕೊಡಿಯಾಲ್‌ಗುತ್ತಿನಿಂದ ಮಣ್ಣಗುಡ್ಡೆ ನಿವಾಸಿ ಮಾಲತಿ ಎಂಬವರು ಮಣ್ಣಗುಡ್ಡೆ ವೇರ್‌ಹೌಸ್ ಜಂಕ್ಷನ್ ಸಮೀಪ ತಲುಪುವಾಗ ಅಪರಿಚಿತರಿಬ್ಬರು ದ್ವಿಚಕ್ರವಾಹನದಲ್ಲಿ ಆಗಮಿಸಿ ಕೃತ್ಯ ಈ ಎಸಗಿದ್ದಾರೆ. ಹಿಂದುಗಡೆ ಕುಳಿತ ಹೆಲ್ಮೆಟ್ ಧರಿಸದ ವ್ಯಕ್ತಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 36 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಮತ್ತು 20 ಗ್ರಾಂ ತೂಕದ ಹವಳದ ಸರವನ್ನು ಬಲಾತ್ಕಾರವಾಗಿ ಕಿತ್ತುಕೊಂಡಿದ್ದಾನೆ.

ಈ ಸಂದರ್ಭ ಮಹಿಳೆ ಚಿನ್ನದ ಸರಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಹವಳದ ಸರ ತುಂಡಾಗಿ ಅರ್ಧ ಭಾಗ ಕೈಯಲ್ಲೇ ಬಾಕಿಯಾಗಿದೆ. ಕಳ್ಳರ ಪಾಲಾದ ಚಿನ್ನದ ಮೌಲ್ಯ 50,000 ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News