×
Ad

ಕೇರಳದಲ್ಲಿ ಮುಂದಿನ ವರ್ಷದ ಹಜ್‌ಯಾತ್ರೆಗೆ ಡಿಸೆಂಬರ್, ಜನವರಿಯಲ್ಲಿ ಅರ್ಜಿ ಸ್ವೀಕಾರ

Update: 2016-11-06 12:14 IST

ಕೊಡೊಟ್ಟಿ, ನವೆಂಬರ್ 6: ಮುಂದಿನ ವರ್ಷ ಹಜ್ ಕರ್ಮನಿರ್ವಹಿಸಲು ಬಯಸುವವರಿಂದ ಅರ್ಜಿಸ್ವೀಕರಿಸಲು ಹಜ್ ಕಮಿಟಿ ಸಭೆ ತಿರ್ಮಾನಿಸಿದೆ.ಹಜ್‌ಕಮಿಟಿ ಅಧ್ಯಕ್ಷ ಕೋಟ್ಟುಮಲೆ ಬಾಪು ಮುಸ್ಲಿಯಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಜ್‌ಯಾತ್ರೆ ನಡೆಸಲು ಬಯಸುವವರಿಂದ ಡಿಸೆಂಬರ್, ಜನವರಿ ತಿಂಗಳಲ್ಲಿ ಅರ್ಜಿಸ್ವೀಕರಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಕೇಂದ್ರ ಹಜ್ ಕಮಿಟಿಯಿಂದ ಅರ್ಜಿಸ್ವೀಕರಿಸುವ ದಿನಾಂಕ ನಿಗದಿಗೊಳಿಸಿ ಸುತ್ತೋಲೆ ಇನ್ನಷ್ಟೇ ತಲುಪಬೇಕಿದೆ. ಅದು ಬಂದೊಡನೆ ಅರ್ಜಿ ಸ್ವೀಕರಿಸುವ ದಿನಾಂಕವನ್ನು ಪ್ರಕಟಿಸಲಾಗುವುದು. ಯಾತ್ರಾರ್ಥಿಗಳಿಗೆ ನೆರವಾಗುವ ತರಬೇತುದಾರರನ್ನು ಮುಂದಿನ ತಿಂಗಳ ಮೊದಲವಾರವೇ ಗೊತ್ತುಪಡಿಸಲು ಸಭೆ ನಿರ್ಣಯಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News