×
Ad

ಹಲ್ಲೆ ಪ್ರಕರಣ:ಆಪ್ ಶಾಸಕನ ಬಂಧನ

Update: 2016-11-06 14:54 IST

ಹೊಸದಿಲ್ಲಿ,ನ.6: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಶ್ಚಿಮ ದಿಲ್ಲಿಯ ಕಿರಾರಿಯ ಆಪ್ ಶಾಸಕ ರಿತುರಾಜ್ ಗೋವಿಂದ ಅವರನ್ನು ದಿಲ್ಲಿ ಪೊಲೀಸರು ರವಿವಾರ ಬಂಧಿಸಿದ್ದಾರೆ. ಇದರೊಂದಿಗೆ ಆಪ್ ಕಳೆದ ವರ್ಷ ಅಧಿಕಾರಕ್ಕೆ ಬಂದ ನಂತರ ಬಂಧನಕ್ಕೊಳಗಾದ ಆ ಪಕ್ಷದ ಶಾಸಕರ ಸಂಖ್ಯೆ 13ಕ್ಕೇರಿದೆ. ಇದರ ಹೊರತಾಗಿ ಇನ್ನೂ 15 ಶಾಸಕರ ವಿರುದ್ಧ ವಿವಿಧ ಆರೋಪಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಛತ್ ಪೂಜಾ ಆಚರಣೆಗಳ ಸಂದರ್ಭ ಗೋವಿಂದ ಅವರು ವ್ಯಕ್ತಿಯೋರ್ವನ ಮೇ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಶನಿವಾರ ಪ್ರದೇಶದಲ್ಲಿ ಘಾಟ್ ನಿರ್ಮಾಣ ಯತ್ನ ಕುರಿತಂತೆ ಶಾಸಕರು ಸಾರ್ವಜನಿಕರೊಂದಿಗೆ ಹೊಯ್‌ಕೈ ನಡೆಸಿದ್ದರೆನ್ನಲಾಗಿದೆ.

 ಛತ್ ಪೂಜೆಗಾಗಿ ಯಮನಾ ನದಿಯ ದಂಡೆಯಲ್ಲಿ ಘಾಟ್ ನಿರ್ಮಾಣ ಪ್ರಯತ್ನ ದಲ್ಲಿದ್ದಾಗ ಪೊಲೀಸರು ಗೋವಿಂದರನ್ನು ಬಂಧಿಸಿದ್ದಾರೆ. ಈ ಸ್ಥಳದಲ್ಲಿ ಭಕ್ತರು ಸೂರ್ಯನಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ ಮತ್ತು ನದಿಯಲ್ಲಿ ಅಥವಾ ಕೆರೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.

ಘಾಟ್ ನಿರ್ಮಾಣಗೊಳ್ಳುತ್ತಿದ್ದ ಸ್ಥಳದಲ್ಲಿ ಕಲ್ಲು ತೂರಾಟ ನಡೆದಿತ್ತು ಮತ್ತು ಗ್ರಾಮಸ್ಥರು ಈ ನಿರ್ಮಾಣವನ್ನು ವಿರೋಧಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಶಾಸಕರು ಅದನ್ನು ಉಲ್ಲಂಘಿಸಿದ್ದರೆಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News