×
Ad

ನ.9ರಂದು ‘ಶಕ್ತಿ ವಸತಿಯುತ ವಿದ್ಯಾಲಯ’ಕ್ಕೆ ಶಿಲಾನ್ಯಾಸ

Update: 2016-11-06 16:09 IST

ಮಂಗಳೂರು,ನ.6:ಶಕ್ತಿ ಎಜುಕೇಶನ್ ಟ್ರಸ್ಟ್ ಇದರ ವತಿಯಿಂದ ಆರಂಭವಾಗಲಿರುವ ಶಕ್ತಿ ವಸತಿ ವಿದ್ಯಾಲಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನವೆಂಬರ್ 9 ರಂದು ಬೆಳಗ್ಗೆ 9.30ಕ್ಕೆ ಶಕ್ತಿ ನಗರದ ಕ್ಲಾಸಿಕ್ ವಿಲೇಜ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಸಂಸ್ಥೆಯ ಆಡಳಿತ ಟ್ರಸ್ಟಿ ಕೆ.ಸಿ.ನಾ ಶಕ್ತಿನಗರದ ಶ್ರೀ ಗೊಪಾಲಕೃಷ್ಣ ಮಂದಿರದ ಸಭಾಂಗಣದ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಿರುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ .ಮೋಹನ್ ಆಳ್ವ ವಸತಿ ನಿಲಯ ಕಟ್ಟಡದ ಶಿಲಾನ್ಯಾಸ ನೆರವೇರಿಸಲಿರುವರು. ಸಮಾರಂಭದಲ್ಲಿ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಐವನ್ ಡಿಸೋಜ, ಮಾಜಿ ಸಚಿವ ಕೃಷ್ಣಾ ಜೆ.ಪಾಲೆಮಾರ್, ಪೊಲೀಸ್ ಕಮೀಷನರ್ ಚಂದ್ರ ಶೇಖರ್, ಮಹಾನಗರ ಪಾಲಿಕೆ ಸದಸ್ಯೆ ಅಖಿಲಾ ಆಳ್ವ, ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕೆ.ಸಿ.ನಾಯ್ಕ್ ತಿಳಿಸಿದ್ದಾರೆ.

ಶಕ್ತಿ ವಸತಿ ವಿದ್ಯಾಲಯದ ವಿಶೇಷತೆ ಶಕ್ತಿ ನಗರದ ಸುಮಾರು ನಾಲ್ಕು ಎಕ್ರೆ ಸುಂದರ ಪರಿಸರದಲ್ಲಿ ನಿರ್ಮಾಣವಾಗಲಿರುವ ಶಕ್ತಿ ವಸತಿಯು ವಿದ್ಯಾಲಯ 1ರಿಂದ 10ನೆ ತರತಿಯವರೆಗೆ ಕೇಂದ್ರೀಯ ವಿದ್ಯಾಲಯದ ಪಠ್ಯಕ್ರಮವನ್ನು ಹೊಂದಿರುತ್ತದೆ.ಪದವಿ ಪೂರ್ವ ತರಗತಿಗಳಿಗೆ ರಾಜ್ಯ ಪಿ.ಯು.ಬೋರ್ಡ್ ಪಠ್ಯ ಕ್ರಮವನ್ನು ಅಳವಡಿಸ ಲಾಗುವುದು.ಉಪಹಾರ ಮಂದಿರ,ಸುಸಜ್ಜಿತ ಕಟ್ಟಡ,ಶೌಚಾಲಯ,ವಿಶಾಲ ಹೊರಾಂಗಣ,ಆಟದ ಮೈದಾನ,ವೈವಿಧ್ಯಮಯ ಕ್ರೀಡಾ ಸಾಮಗ್ರಿ,ಒಳಾಂಗಣ ಕ್ರೀಡಾಂಗಣ,ಸುಸಜ್ಜಿತ ವಾಚನಾಲಯ, ಇ-ಬುಕ್, ಇಂಟರ್ ನೆಟ್ ಸೌಲಭ್ಯಗಳೊಂದಿಗೆ ಗರಿಷ್ಠ 1,200 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಿ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗುವುದು. ಅತ್ಯುನ್ನತ ಮಟ್ಟದ ಶಿಕ್ಷಣ ನೀಡುವ ರೀತಿಯಲ್ಲಿ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದು ಕೆ.ಸಿ.ನಾಯ್ಕ್ ತಿಳಿಸಿದರು.

2017 -18ನೆ ಸಾಲಿನಲ್ಲಿ 1ರಿಂದ 3ನೆ ತರಗತಿಯನ್ನು ಆರಂಭಿಸಲಾಗುವುದು.ಬಳಿಕ 2018-19ರಲ್ಲಿ ಪಿಯುಸಿ ತರಗತಿಗಳನ್ನು ಆರಂಭಿಸಲಾಗುವುದು.ಶಾಲಾ ಚಟುವಟಿಕೆಗಳಿಗೆ ತೊಂದರೆಯಾಗದಂತೆ ತರಗತಿ ಕೋಣೆ ಹಾಗೂ ಇತರ ಸೌಕರ್ಯಗಳನ್ನು ರಜೆಯ ಸಮಯದಲ್ಲಿ ನಿರ್ಮಿಸಲಾಗುವುದು. 2016ರಲ್ಲಿ-17ನೆ ಸಾಲಿನಲ್ಲಿ ಜೂನ್ ಒಂದರಿಂದ ಶ್ರೀ ಗೊಪಾಲಕೃಷ್ಣ ಪ್ರೀ ಸ್ಕೂಲ್ ಎಂಬ ಪೂರ್ವ ಪ್ರಾಥಮಿಕ ಶಾಲೆ ಶ್ರೀ ಗೊಪಾಲಕೃಷ್ಣ ಸಮುಚ್ಛಯದಲ್ಲಿ ಪ್ರಾಂಭವಾಗಿದೆ. ಉತ್ತಮ ಪ್ರತಿಕ್ರಿಯೆ ಈ ಪ್ರದೇಶದ ಜನತೆಯಿಂದ ದೊರೆತ ಹಿನ್ನೆಲೆಯಲ್ಲಿ ಮುಂದುವರಿದ ಭಾಗವಾಗಿ ಶಕ್ತಿ ವಸತಿಯುತ ವಿದ್ಯಾಲಯ ಪ್ರಾರಂಭವಾಗಲಿದೆ. ‘ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕಲಿತ ಮಕ್ಕಳಿಗೆ ಇಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು.ವಿದ್ಯಾಲಯ ಸಮುಚ್ಛಯ ಕಾರ್ಯ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಕೆ.ಸಿ.ನಾಯ್ಕ್ ತಿಳಿಸಿದರು.

ಉತ್ತಮ ಶಿಕ್ಷಣ ದಿಂದ ಸಮಗ್ರ ಅಭಿವೃದ್ಧಿ ಎಂಬ ಧ್ಯೇಯ ದೊಂದಿಗೆ ಶಕ್ತಿನಗರದ ಸಾಮಾಜಿಕ ಪರಿವರ್ತನೆ ಹಾಗೂ ಅಭಿವೃದ್ಧಿಗೆ ವಿದ್ಯಾ ಕ್ಷೇತ್ರವನ್ನು ನಿರ್ಮಿಸಲು ಕೆ.ಸಿ ನಾಯ್ಕ್ ಹೊರಟಿದ್ದಾರೆ. ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸುವ ಕೌಶಲ್ಯ ತರಬೇತಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆಯ ಸಲಹೆಗಾರರಾದ ವಿ.ಕೆ.ತಾಳಿತ್ತಾಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಟ್ರಸ್ಟಿ ಸಂಜೀತ್ ನಾಯ್ಕ್ ಸ್ವಾಗತಿಸಿದರು.ಟ್ರಸ್ಟಿಗಳಾದ ಸುಗುಣಾ ಸಿ. ನಾಯ್ಕ್ , ಡಾ.ಮುರಳಿಧರ ನಾಯ್ಕ್, ರೇಶ್ಮಾ ನಾಯ್ಕ್ , ಸಂಸ್ಥೆಯ ಹಿತೈಷಿ ಸಲಹೆಗಾರರಾದ ವಿ.ಕೆ.ತಾಳಿತ್ತಾಯ, ಪಿ.ಎಂ.ಎ.ರಝಾಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News