ದುಬೈಯಿಂದ ಬಂದ ಮಹಿಳೆಯ ಒಳಉಡುಪಿನಲ್ಲಿತ್ತು ಲಕ್ಷಾಂತರ ರೂ.ಗಳ ಚಿನ್ನ!
Update: 2016-11-06 16:52 IST
ಹೊಸದಿಲ್ಲಿ,ನ.6: ತನ್ನ ಒಳಉಡುಪಿನಲ್ಲಿ 61 ಲ.ರೂ.ಮೌಲ್ಯದ ಚಿನ್ನವನ್ನು ಬಚ್ಚಿಟ್ಟು ಕೊಂಡು ಕಳ್ಳ ಸಾಗಾಣಿಕೆಗೆ ಪ್ರಯತ್ನಿಸಿದ್ದ ಮಹಿಳೆಯೋರ್ವಳನ್ನು ಇಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಶುಕ್ರವಾರ ದುಬೈನಿಂದ ಆಗಮಿಸಿದ ವಿಮಾನದಲ್ಲಿ ಬಂದಿಳಿದಿದ್ದ ಈ ಮಹಿಳೆಯನ್ನು ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಆಕೆ ತನ್ನ ಒಳಉಡುಪಿನ ಜೇಬುಗಳಲ್ಲಿ ಒಟ್ಟು 1,400 ಗ್ರಾಂ ತೂಕದ 24 ಕ್ಯಾರಟ್‌ನ 12 ಚಿನ್ನದ ಗಟ್ಟಿಗಳು ಮತ್ತು ಒಟ್ಟು 780.82 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೌಲ್ಯ 61.37 ಲ.ರೂ.ಗಳಾಗಿವೆ ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೋರ್ವರು ತಿಳಿಸಿದರು.