ಸುವಿಚಾರ ಪ್ರಕಾಶನ ಸಮಿತಿ ರಚನೆ: ಸಂಚಾಲಕರಾಗಿ ಹಕೀಂ ಪದಡ್ಕ ಆಯ್ಕೆ
ಪುತ್ತೂರು,ನ.6: ಯುವ ಬರಹಗಾರರು ಹಾಗೂ ಸಾಹಿತ್ಯದಾಹಿಗಳನ್ನು ಒಗ್ಗೂಡಿಸಲು, ಸಾಮರಸ್ಯದೊಂದಿಗೆ ಸಾಹಿತ್ಯ ಎಂಬ ವಾಕ್ಯದಡಿ ‘ಸುವಿಚಾರ ಪ್ರಕಾಶನ’ದ ರಚನಾ ಸಭೆಯು ಇತ್ತೀಚೆಗೆ ಪುತ್ತೂರಿನ ದಿನೇಶ್ ಭವನದ ಸುದ್ದಿ ಸೆಂಟರ್ ಹಾಲಿನಲ್ಲಿ ನಡೆಯಿತು.
ಈ ಸಭೆಯಲ್ಲಿ ಪ್ರಕಾಶನ ಸಮಿತಿಯ ಪ್ರಧಾನ ಸಂಚಾಲಕರಾಗಿ ಹಕೀಂ ಪದಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ನಿಝಾಂ ಗೋಳಿಪಡ್ಪು, ಹಸನ್ ಮಾಡೂರು, ಹಸನ್ಮುಖಿ ಬಡಗನ್ನೂರು ಹಾಗೂ ಬಾಪು ಅಮ್ಮೆಂಬಳ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೇ ಲುಕ್ಮಾನ್ ಅಡ್ಯಾರ್, ಇರ್ಝಾನ್ ಅಡ್ಡೂರು, ಕೀರ್ತನ್ ಕುಮಾರ್ ಮಯ್ಯಾಳ, ಸಫ್ವಾನ್ ಸವಣೂರು ಹಾಗೂ ಮಹಮ್ಮದ್ ಗಝ್ಝಾಲಿ ವಿಟ್ಲ ಅವರನ್ನು ಕಾರ್ಯಾಕಾರಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.
ಸುವಿಚಾರ ಪ್ರಕಾಶನದ ಉದ್ಘಾಟನಾ ಸಮಾರಂಭ, ಕವಿಗೋಷ್ಟಿ, ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಡಿಸೆಂಬರ್ 3 ನೇ ಶನಿವಾರದಂದು ಪುತ್ತೂರಿನಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಹೈದರಲಿ ಐವತ್ತೊಕ್ಲು, ಹನೀಫ್ ಪಿ.ಕೆ.ಎಂ ಉರುವಾಲುಪದವು, ಕಲಂದರ್ ಶಾಫಿ ಅಡ್ಡೂರು, ಯುಪಿ ಬೆಳ್ಳಾರೆ, ನಿಝಾಂ ಮಂಚಿ, ಸಮೀರ್ ಗೋಳಿಪಡ್ಪು ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.