ಅಪಘಾತ: ಗಾಯಾಳು ಮೃತ್ಯು
Update: 2016-11-06 23:20 IST
ಕಾರ್ಕಳ, ನ.6: ಬೆಳ್ಮಣ್ ಪೇಟೆಯ ಬಳಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರರೊಬ್ಬರು ಚಿಕಿತ್ಸೆ ಫಲಕಾರಿ ಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಪ್ರಕಾಶ್ ಶೆಟ್ಟಿ(52) ಎಂದು ಗುರುತಿಸಲಾಗಿದೆ.
ನ.4ರಂದು ಸಂಜೆ ವೇಳೆ ಪ್ರಕಾಶ್ ಶೆಟ್ಟಿ ತನ್ನ ಬೈಕ್‌ನಲ್ಲಿ ಮುಂಡ್ಕೂರು ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿರುವಾಗ ಬೆಳ್ಮಣ್ ಪೇಟೆಯ ರಸ್ತೆಯಲ್ಲಿ ಹಾಕಿದ ಹಮ್ಲರ್ ಬಳಿ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರಕಾಶ್ ಶೆಟ್ಟಿ, ಚಿಕಿತ್ಸೆ ಫಲಕಾರಿ ಯಾಗದೆ ನ.6ರಂದು ಬೆಳಗ್ಗೆ 8.45ರ ಸುಮಾರಿಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.