×
Ad

ನ.12ರಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ

Update: 2016-11-06 23:38 IST

ಮಂಗಳೂರು, ನ.6: ಕರಾವಳಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ ಅಸೋಸಿಯೇಶನ್ ಮತ್ತು ಕಾಸರಗೋಡು ಜಿಲ್ಲಾ ಬೀಡಿ ಕಂಟ್ರಾಕ್ಟ್‌ದಾರರ ಸಂಯುಕ್ತಾಶ್ರಯದಲ್ಲಿ ಗುತ್ತಿಗೆದಾರರ ಕಮಿಷನ್ ಹೆಚ್ಚಿಸುವಂತೆ ಆಗ್ರಹಿಸಿ ನ.12ರಿಂದ ಕಂಪೆನಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಕರಾವಳಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಕೆ.ಎ. ಖಾದರ್ ಕಿನ್ನಿಗೋಳಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಮಿಷನ್ ಹೆಚ್ಚಳಕ್ಕೆ ಬೀಡಿ ಕಂಪೆನಿ ಮಾಲಕರು ಏಕಪಕ್ಷೀಯವಾಗಿ ಕಮಿಷನ್ ಹೆಚ್ಚಿಸಿದ್ದು ತಮ್ಮ ಬೇಡಿಕೆಗಳ ಅಹವಾಲನ್ನು ಪುರಸ್ಕರಿಸುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಕಮಿಷನ್ ಹೆಚ್ಚಿಸುವ ಬದಲು ಕಡಿಮೆಗೊಳಿಸುತ್ತಾ ಬರುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈಗಾಗಲೇ ಪ್ರತೀ 1ಸಾವಿರ ಬೀಡಿಗೆ ನೀಡುತ್ತಿರುವ 14.50 ರೂ.ಗೆ 2.50 ರೂ. ಹೆಚ್ಚು ನೀಡಬೇಕು ಎಂಬುದು ತಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.
ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾಸರಗೋಡಿನಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು 4 ಕಂಪೆನಿಗಳು ಬೆಂಬಲ ಸೂಚಿಸಿವೆ. ದ.ಕ.ಜಿಲ್ಲೆಯಲ್ಲಿಯೂ ಕೆಲವೊಂದು ಉದ್ದಿಮೆ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News