ನ.18ರಂದು ಜೈಲ್ ಭರೋ ಚಳವಳಿ
ಮಂಗಳೂರು, ನ.6: ಕರ್ನಾಟಕ ಪ್ರಾಂತ ರೈತ ಸಂಘದ (ಎಐಕೆಎಸ್) ವತಿಯಿಂದ ಭೂಮಿ ಹಕ್ಕುಗಳಿಗೆ ಆಗ್ರಹಿಸಿ ನ.18ರಂದು ರಾಜ್ಯಾದ್ಯಂತ ‘ಜೈಲ್ ಭರೋ ಚಳವಳಿ’ ಹಮ್ಮಿಕೊಂಡಿದ್ದು, ಅಂದು ನಗರದಲ್ಲಿ ಮೆರವಣಿಗೆ ನಡೆಸಿ ಬೆಳಗ್ಗೆ 10:30ಕ್ಕೆ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ಶ್ರೀಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರಕಾರದ ಈ ರೈತ ವಿರೋಧಿ ನಿಲುವಿನ ವಿರುದ್ಧ ಹೋರಾಟವನ್ನು ಕೈಗೊಳ್ಳಲಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ನೀತಿ ವಿರುದ್ಧ ಅಖಿಲ ಭಾರತ ಕಿಸಾನ್ ಸಂಘರ್ಷ ಜಾಥಾದ ಸ್ವಾಗತ ಸಮಾರಂಭ ನ.15ರಂದು ಬೆಳಗ್ಗೆ 10:30ಕ್ಕೆ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಲಿದೆ. ‘ಕೃಷಿಯನ್ನು ರಕ್ಷಿಸಿ, ರೈತಾಪಿಯನ್ನು ರಕ್ಷಿಸಿ, ದೇಶವನ್ನು ರಕ್ಷಿಸಿ’ ಘೋಷಣೆಯಡಿ ಕೇರಳದ ಕನ್ಯಾಕುಮಾರಿಯಿಂದ ಹೊರಡುವ ದಿಲ್ಲಿ ಚಲೋ ಜಾಥಾ ತಲಪಾಡಿ ಮೂಲಕ ಮಂಗಳೂರಿಗೆ ತಲುಪಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಮತ್ತು ಉಪಾಧ್ಯಕ್ಷ ಕೃಷ್ಣಪ್ಪಸಾಲ್ಯಾನ್ ಉಪಸ್ಥಿತರಿದ್ದರು.