ಅಡ್ಯಾರ್ ಕಣ್ಣೂರು ಜಮಾಅತ್‌ನಲ್ಲೊಂದು ಸರ್ವೇ ಕ್ರಾಂತಿ!
# ಡಾಟಾ ಎಂಟ್ರಿ ಮೂಲಕ ಅರ್ಹರಿಗೆ ಸರಕಾರಿ, ಸಂಘ-ಸಂಸ್ಥೆಗಳ ಸವಲತ್ತುಗಳ ಮಾಹಿತಿ
#ಪ್ರತೀ ಮನೆಗೆ ಐಡಿ ಕಾರ್ಡ್, ಮನೆ ಸಂಖ್ಯೆ ವಿತರಣೆ
ಬಂಟ್ವಾಳ, ನ.7: ಅಡ್ಯಾರು ಕಣ್ಣೂರು ಬದ್ರಿಯಾ ಕೇಂದ್ರ ಜುಮಾ ಮಸೀದಿಯ ಆಡಳಿತ ಮಂಡಳಿಯು ಕ್ರಾಂತಿಕಾರಿ ಯೋಜ ನೆಯೊಂದರ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಮಸೀದಿ ಆಡಳಿತ ಸಮಿತಿಯು ಜಮಾಅತ್ ವ್ಯಾಪ್ತಿಯ ಪ್ರತೀ ಮುಸ್ಲಿಮ್ ಕುಟುಂಬದ ಎಲ್ಲ ಸದಸ್ಯರ ಸರ್ವ ಡಾಟಾ ವನ್ನು ದಾಖಲಿಸಿಟ್ಟುಕೊಂಡಿದೆ. ಆ ಮೂಲಕ ಜಮಾಅತ್ ವ್ಯಾಪ್ತಿಯ ಮುಸ್ಲಿಮರ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳನ್ನು ಅರಿತುಕೊಂಡು ಅರ್ಹರಿಗೆ ಸರಕಾರಿ ಸವಲತ್ತುಗಳು, ಸಂಘ - ಸಂಸ್ಥೆಗಳ ನೆರವನ್ನು ಸುಲಭವಾಗಿ ತಲುಪಿ ಸಲು ಶ್ರಮಿಸುತ್ತಿದೆ.
ಜಮಾಅತ್ ಕಮಿಟಿಯೊಂದು ಇಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿರುವುದು ಕರಾವಳಿ ಜಿಲ್ಲೆಗಳಲ್ಲೇ ಬಹುಶಃ ಇದು ಪ್ರಥಮ. ಕಣ್ಣೂರು ಕೇಂದ್ರ ಜುಮಾ ಮಸೀದಿಯ ಆಡಳಿತ ಮಂಡಳಿ ತನ್ನ ಅಧೀನದ 13 ಜಮಾಅತ್‌ಗಳ ವ್ಯಾಪ್ತಿಯ ಲ್ಲಿರುವ ಮುಸ್ಲಿಮ್ ಕುಟುಂಬಗಳ ಸರ್ವೇ ಯನ್ನು ಈಗಾಗಲೇ ಮಾಡಿದೆ. ಈ ಸರ್ವೇಯು ಕುಟುಂಬದ ಎಲ್ಲ ಸದಸ್ಯರಿಗೆ ಸಂಬಂಧಿಸಿದ ಸಕಲ ಮಾಹಿತಿಗಳನ್ನು ಒಳಗೊಂಡಿದೆ.
ಏನಿದು ಸರ್ವೇ?:
ಕಣ್ಣೂರು ಬದ್ರಿಯಾ ಕೇಂದ್ರ ಜುಮಾ ಮಸೀದಿಯ ಆಡಳಿತ ಮಂಡಳಿ ತನ್ನ ಅಧೀನದ ಜಮಾಅತ್‌ಗಳ ಮುಸ್ಲಿಮ್ ಕುಟುಂಬಗಳ ಸರ್ವೇಗೆ ಎಲ್ಲಾ ಮಾಹಿತಿಗಳನ್ನು ಬಯಸುವ ಒಂದು ಫಾರಂ ಅನ್ನು ಸಿದ್ಧಪಡಿಸಿದೆ. ಸರ್ವೇಗಾಗಿ ಐವರು ಯುವಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಈ ಐವರು ಸುಮಾರು ಒಂದು ವರ್ಷಗಳ ಕಾಲ 13 ಜಮಾಅತ್ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ಈ ಮಾಹಿತಿ ಕಲೆ ಹಾಕಿದ್ದಾರೆ. ಸರ್ವೇ ಫಾರಂನಲ್ಲಿ ಕುಟುಂಬವೊಂದರ ಎಲ್ಲ ಸದಸ್ಯರ ಧಾರ್ಮಿಕ, ಲೌಕಿಕ ವಿದ್ಯಾ ರ್ಹತೆ, ಉದ್ಯೋಗ, ವಿವಾಹ, ಅನಾರೋಗ್ಯ, ವಿಕಲಚೇತನ, ಮಾಸಿಕ ಆದಾಯ, ರಾಜ ಕೀಯ ಪಕ್ಷದಲ್ಲಿ ಗುರುತಿಸುವಿಕೆ, ವೋಟರ್ ಐಡಿ, ಆರೋಗ್ಯ ಕಾರ್ಡ್‌ಗಳು, ಮನೆಯ ಸ್ಥಿತಿಗತಿ, ಮನೆಯಲ್ಲಿ ವಿದ್ಯುತ್, ಶೌಚಾಲಯ ಇದೆಯೇ, ರೇಶನ್ ಕಾರ್ಡ್ ಇದೆಯೇ ಇತ್ಯಾದಿ ಮಾಹಿತಿಗಳನ್ನು ಕೇಳಲಾಗಿದೆ. ಕುಟುಂಬಕ್ಕೊಂದರಂತೆ ಫಾರಂಗಳನ್ನು ಬಳಸಲಾಗಿದೆ.
ಮುಂದೇನು?
ಈ ಸರ್ವೇ ಮೂಲಕ ಮಸೀದಿಯ ಆಡಳಿತ ಮಂಡಳಿಗೆ ತನ್ನ ಅಧೀನದ ಜಮಾಅತ್‌ಗಳ ವ್ಯಾಪ್ತಿಯ ಲ್ಲಿರುವ ಬಡ ಕುಟುಂಬಗಳು ಎಷ್ಟು, ನಿರ್ಗತಿಕರು, ವಿಧವೆಯರು, ಅನಾಥರು, ವಿಕಲಚೇತನರು, ವಯಸ್ಸು ಮೀರಿದರೂ ಮದುವೆಯಾಗದೆ ಉಳಿದಿರುವ ಯುವತಿ ಯರು, ಅನಾರೋಗ್ಯ ಪೀಡಿತರು, ಸ್ವಂತ ಮನೆಯಿಲ್ಲದವರು, ಭೂರಹಿತರು, ಬಾಡಿಗೆ ಮನೆಯಲ್ಲಿ ವಾಸಿಸುವವರು, ಆಶ್ರಯವಿಲ್ಲದ ವೃದ್ಧರು, ಮಧ್ಯಮ ವರ್ಗ, ಬಡತನ ರೇಖೆಗಿಂತ ಕೆಳಗಿರುವವರು, ಇಡೀ ಜಮಾಅತ್‌ನಲ್ಲಿರುವ ಒಟ್ಟು ಮನೆ, ಜನಸಂಖ್ಯೆ, ವಿದೇಶದಲ್ಲಿರುವವರು, ಸರಕಾರಿ ಉದ್ಯೋಗದಲ್ಲಿರುವವರು... ಹೀಗೆ ಜಮಾಅತರ ಸ್ಪಷ್ಟ ಚಿತ್ರಣ ದೊರೆತಿದೆ.
ಸರ್ವೇಯ ಮಾಹಿತಿಯನ್ನು ದಾಖಲಿಸಿ ಡಲು ಜಮಾಅತ್ ಕಮಿಟಿಯು ಸಾಫ್ಟ್ ವೇರ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಅದಕ್ಕೆ ಡಾಟಾ ಅಪ್‌ಲೋಡ್ ಮಾಡುವ ಕಾರ್ಯ ನಡೆಯುತ್ತಿದೆ. ಮುಂದೆ ಈ ಡಾಟಾದ ನೆರವು ಪಡೆದು ಅರ್ಹರಿಗೆ ಸರಕಾರದ ಯಾ ಸಂಘ ಸಂಸ್ಥೆಗಳು ನೀಡುವ ಸವಲತ್ತುಗಳ ಮಾಹಿತಿ ಒದಗಿಸುವ ಕಾರ್ಯವನ್ನು ಆಡಳಿತ ಮಂಡಳಿ ಮಾಡಲಿದೆ. ಉದಾ ಹರಣೆಗೆ ವಿಕಲಚೇತನರಿಗೆ ಸರಕಾರ ಸೌಲಭ್ಯವೊಂದನ್ನು ಘೋಷಿಸಿದರೆ ಮಸೀದಿಯ ಕಂಪ್ಯೂ ಟರ್‌ನಲ್ಲಿರುವ ಸರ್ವೇ ವಿವರದಲ್ಲಿ ವಿಕಲ ಚೇತನರ ಪಟ್ಟಿಯನ್ನು ಪರಿಶೀಲಿಸಿ ಅರ್ಹರಿಗೆ ಸ್ವಯಂಸೇವಕರ ಮೂಲಕ ಜಮಾಅತ್ ಸಮಿತಿ ಮಾಹಿತಿ ನೀಡಲಿದೆ.
ಸ್ವಯಂಸೇವಕರ ಉಪಯೋಗ
ಕಣ್ಣೂರು ಬದ್ರಿಯಾ ಮಸೀದಿಯ ಈ ಸರ್ವೇಯ ಉದ್ದೇಶ ಯಶಸ್ವಿಯಾಗಬೇಕಾ ದರೆ ಮಾನವ ಶ್ರಮದ ಅಗತ್ಯವಿದೆ. ಇದ ಕ್ಕಾಗಿ ಜಮಾಅತ್ ವ್ಯಾಪ್ತಿಯ ಯಂಗ್‌ಮೆನ್ಸ್ ಸಂಘ-ಸಂಸ್ಥೆಗಳ ಕಾರ್ಯಕರ್ತರನ್ನು, ಸ್ವಯಂ ಸೇವಕರನ್ನು ಬಳಸಿಕೊಳ್ಳಲು ಆಡಳಿತ ಮಂ ಡಳಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾ ಗಲೇ ಕೆಲವು ಸಂಘ-ಸಂಸ್ಥೆಗಳು, ಯುವಕರು ಮುಂ ಬಂದಿದ್ದಾರೆ ಎಂದು ಆಡಳಿತ ಸಮಿತಿ ತಿಳಿಸಿದೆ.
ಮಸೀದಿ ಕೆಲಸಕ್ಕೂ ಸೈ
ಕಣ್ಣೂರು ಬದ್ರಿಯಾ ಕೇಂದ್ರ ಜುಮಾ ಮಸೀದಿ ತನ್ನ ಅಧೀನಕ್ಕೊಳಪಟ್ಟ 13 ಜಮಾಅತ್‌ಗಳನ್ನು ಪ್ರತ್ಯೇಕ ಕರಿಯಾ ಎಂದು ವಿಂಗಡಿಸಿದೆ. ಪ್ರತಿಯೊಂದು ಕರಿಯಾಗೆ 1, 2, 3ರಂತೆ ಪ್ರತ್ಯೇಕ ಸಂಖ್ಯೆಯನ್ನು ನೀಡಿದೆ. ಇದರ ಅಧೀನದಲ್ಲಿರುವ ಪ್ರತಿಯೊಂದು ಮುಸ್ಲಿಮ್ ಮನೆಗೂ ಪ್ರತ್ಯೇಕ ಸಂಖ್ಯೆಯನ್ನು ನೀಡಿ ಅದರ ಆಧಾರದಲ್ಲಿ ಮನೆಗೊಂದರಂತೆ ಐಡಿ ಕಾರ್ಡ್ ನೀಡಿದೆ. ಐಡಿ ಕಾರ್ಡ್‌ನಲ್ಲಿ ಮನೆ ಯಜಮಾನನ ಹೆಸರು, ವಿಳಾಸ, ಕರಿಯಾದ ಸಂಖ್ಯೆ, ಜಮಾಅತ್ ನೀಡಿರುವ ಮನೆ ಸಂಖ್ಯೆ, ರೇಶನ್ ಕಾರ್ಡ್ ಸಂಖ್ಯೆ, ವೋಟರ್ ಐಡಿ ಸಂಖ್ಯೆ, ದೂರವಾಣಿ ಸಂಖ್ಯೆ, ಕುಟುಂಬ ಸದಸ್ಯರ ಸಂಖ್ಯೆ ನಮೂದಿಸಲಾಗಿದೆ. ಮಸೀದಿಯ ಮಾಸಿಕ ವಂತಿಗೆ, ವಿವಾಹ ಪ್ರಮಾಣಪತ್ರ ಸಹಿತ ಮಸೀದಿಯ ಕೆಲಸ ಕಾರ್ಯಗಳಿಗೆ ಈ ಐಡಿ ಕಾರ್ಡನ್ನೇ ಬಳಸಲು ಸೂಚಿಸಲಾಗಿದೆ. ಕುಟುಂಬದಲ್ಲಿ ಹೊಸ ಮಗುವಿನ ಜನನ ಅಥವಾ ಯಾರಾ ದರೂ ಮರಣ ಹೊಂದಿದರೆ ಜಮಾಅತ್ ನಲ್ಲಿ ದಾಖಲಿಸಿ ಐಡಿ ಕಾರ್ಡನ್ನು ಬದಲಾಯಿ ಸಿಕೊಳ್ಳಬೇಕು. ಇದರಿಂದ ಜನನ-ಮರಣದ ಲೆಕ್ಕವೂ ಜಮಾಅತ್‌ಗೆ ಸ್ಪಷ್ಟವಾಗಿ ಸಿಗಲಿದೆ.
ಪ್ರಸ್ತುತ ಕಾಲದಲ್ಲಿ ಮಸೀದಿ ಆಧ್ಯಾತ್ಮಿಕ, ಮಾಸಿಕ ವಂತಿಗೆ, ನಿಖಾಹ್ ಇತ್ಯಾದಿ ಗಳಿಗೆ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದೆ. ಜಮಾಅತ್ ವ್ಯಾಪ್ತಿಯ ಲ್ಲಿರುವ ಬಡವರ, ನಿರ್ಗತಿಕರ, ಅನಾಥರ, ವಿಧವೆಯರ, ವಿಕಲ ಚೇತನರ, ರೋಗಿಗಳ, ನಿರುದ್ಯೋಗಿಗಳ ಬಗ್ಗೆ ಮಸೀದಿ ಆಡಳಿತ ಸಮಿತಿಗಳು ಗಮನಹರಿಸುತಿಲ್ಲ. ಈ ಕಾರಣದಿಂದಾಗಿ ಬಡವರು ಇನ್ನಷ್ಟು ಬಡವರಾಗುತ್ತಲೇ ಇದ್ದಾರೆ. ಇವೆಲ್ಲವನ್ನು ಮನಗಂಡು ನಮ್ಮ ಜಮಾಅತ್ ಈ ಸರ್ವೇ ನಡೆಸಿದೆ. ಈ ಸರ್ವೇ ಡಾಟಾವನ್ನು ಆಧರಿಸಿ ಮುಂದಿನ ದಿನದಲ್ಲಿ ಅರ್ಹ ಫಲಾನುಭವಿಗಳಿಗೆ ಸರಕಾರ, ಸಂಘ- ಸಂಸ್ಥೆಗಳ ಸವಲತ್ತುಗಳ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಒದಗಿಸಿ ಅದರ ಫಲಾನುಭವಿ ಗಳಾಗುವಂತೆ ಮಾಡಲಾಗುವುದು. ವಿವಿಧ ಕಾರಣಗಳಿಂದ ಅರ್ಧ ದಲ್ಲಿ ಶಾಲೆಬಿಟ್ಟವರ ಶೈಕ್ಷಣಿಕ ಅಭಿ ವೃದ್ಧಿಗೆ ಸಹಕರಿಸುವುದು, ಮದುವೆಯಾಗದ ಹೆಣ್ಣು ಮಕ್ಕಳ ಮದುವೆ, ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ, ಬಡ, ನಿರ್ಗತಿಕರಿಗೆ ಆಹಾರ ಸಾಮಗ್ರಿ ಒದಗಿಸುವ ನೀಡುವ ಬಗ್ಗೆಯೂ ಚಿಂತಿಸಲಾಗುವುದು. ಇವೆಲ್ಲದರ ಯಶಸ್ಸಿಗೆ ಜಮಾಅತ್ ವ್ಯಾಪ್ತಿಯಲ್ಲಿರುವ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಸ್ವಯಂಸೇವಕರ ಸಹಾಯ ಕೋರಲಾಗುವುದು.
- ಇಕ್ಬಾಲ್ ಅಹ್ಮದ್ ಎ.ಕೆ., ಕಣ್ಣೂರು ಬದ್ರಿಯಾ ಜುಮಾ ಮಸೀದಿ ಪ್ರ. ಕಾರ್ಯದರ್ಶಿ
ಬದ್ರಿಯಾ ಕೇಂದ್ರ ಜುಮಾ ಮಸೀದಿಯ ಅಧೀನದಲ್ಲಿರುವ 13 ಜಮಾಅತ್‌ಗಳ ’ಜಮಾಅತ್ ಸರ್ವೇ’ ಹಲವು ವರ್ಷಗಳ ಕನಸಾಗಿದೆ. ಮಸೀದಿಯ ಪ್ರಸ್ತುತ ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದೀಗ ಸರ್ವೇ ಕಾರ್ಯ ಮುಗಿದಿದ್ದು ಇಡೀ ಜಮಾಅತ್ ಮುಸ್ಲಿಮ್ ಕುಟುಂಬಗಳ ಸ್ಥಿತಿಗತಿಯ ಸ್ಪಷ್ಟ ಚಿತ್ರಣ ಜಮಾಅತ್ ಮುಂದಿದೆ. ಇದರ ಅಧಾರದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅರ್ಹರಿಗೆ ಸರಕಾರದಿಂದ ಮತ್ತು ಸಂಘ-ಸಂಸ್ಥೆಗಳಿಂದ ದೊರೆ ಯುವ ಸವಲತ್ತುಗಳನ್ನು ಕಲ್ಪಿಸಿಕೊಡಲು ಸುಲಭವಾಗಲಿದೆ.
-ಡಿ.ಅಬ್ದುಲ್ ಹಮೀದ್ ಕಣ್ಣೂರು, ಸಾಮಾಜಿಕ ಕಾರ್ಯಕರ್ತ