ತಲಾಕ್ ಬಗ್ಗೆ ಮಾತನಾಡಿದ ವೈದೇಹಿ
ಮಂಗಳೂರು, ನ.7: ಹೆಣ್ಣಿನ ಆತಂಕದ ಬದುಕು ಎಲ್ಲ ಧರ್ಮದಲ್ಲೂ ಒಂದೇ ರೀತಿ ಇದೆ. ಮುಸ್ಲಿಮರಲ್ಲಿ ಕುಟುಂಬ ಜೀವನ ಸಾಧ್ಯವಿಲ್ಲ ಎಂದಾದರೆ ತಲಾಕ್ ನೀಡುತ್ತೀರಿ. ಅಲ್ಲಿಗೆ ಸಂಬಂಧ ಮುರಿಯುತ್ತದೆ. ನಂತರ ಸ್ವತಂತ್ರವಾಗಿ ಬದುಕಬಹುದು. ಹೆಣ್ಞು- ಗಂಡು ಬೇರೆ ಮದುವೆ ಆಗಬಹುದು. ನಮ್ಮ ಬ್ರಾಹ್ಮಣರಲ್ಲಿ ಹಾಗಿಲ್ಲ ಎಂದು ಖ್ಯಾತ ಲೇಖಕಿ ವೈದೇಹಿ ಅಭಿಪ್ರಾಯಪಟ್ಟಿದ್ದಾರೆ.
'ಇರುವೆ ಪ್ರಕಾಶನ' ಪ್ರಕಟಿಸಿರುವ ಲೇಖಕ ಮುಹಮ್ಮದ್ ಕುಳಾಯಿ ಅವರ 'ಕಾಡಂಕಲ್ಲ್ ಮನೆ' ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಲಾಕ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನೀವು (ಮುಸ್ಲಿಮರು) ಕುಟುಂಬ ಜೀವನ ಸಾಧ್ಯವಿಲ್ಲ ಎಂದಾದರೆ ತಲಾಕ್ (ವಿವಾಹ ವಿಚ್ಛೇದನ) ಕೊಡಿತ್ತೀರಿ. ಅಲ್ಲಿಗೆ ಸಂಬಂಧ ಮುರಿಯುತ್ತದೆ. ನಂತರ ಸ್ವತಂತ್ರವಾಗಿ ಬದುಕಬಹುದು.ಹೆಣ್ಞು- ಗಂಡು ಬೇರೆ ಮದುವೆ ಆಗಬಹುದು. ನಮ್ಮ ಬ್ರಾಹ್ಮಣರಲ್ಲಿ ಹಾಗಿಲ್ಲ. ಬೇಗ ವಿಚ್ಛೇದನ ಆಗುವುದಿಲ್ಲ. ಬಿಟ್ಟು ಹೋದ ಗಂಡ ಬರುತ್ತಾನೆ ಎಂದು ಕಾದು ಕಾದು ಹೆಂಡತಿ ಬಸವಳಿದು ಹೋಗುತ್ತಾಳೆ. ಯಾರ್ಯಾರ ಮನೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಗಂಡ ಸತ್ತರಂತೂ ಆ ಮನೆಯಲ್ಲಿ ಆಕೆಗೆ ಬೆಲೆಯೂ ಇಲ್ಲ, ಮರು ಮದುವೆಯೂ ಇಲ್ಲ. ಆಕೆಯೂ ಊಟ ಮಾಡಬೇಕಾದರೆ ಮನೆ ಕೆಲಸ ಮಾಡಲು ಹೋಗಬೇಕು. ಇಂಥ ನೋವು ಯಾರಲ್ಲೂ ಹೇಳಲು ಆಗುತ್ತಿಲ್ಲ. ಭಾಷಣದಲ್ಲಿ ಹೇಳಿ ಪ್ರಯೋಜನವೂ ಇಲ್ಲ. ಕಾದಂಬರಿಯ ಐಸು ಪಾತ್ರ ಎಲ್ಲ ಜಾತಿ, ಧರ್ಮದ ಕೈಗನ್ನಡಿಯಂತಿದೆ. ಹೆಣ್ಣಿನ ಆತಂಕದ ಬದುಕು ಎಲ್ಲ ಧರ್ಮದಲ್ಲೂ ಒಂದೇ ರೀತಿ ಇದೆ ಎಂದು ವೈದೇಹಿ ಅವರು ಅಭಿಪ್ರಾಯಪಟ್ಟರು.