ಮುಂದಿನ ಗುರಿ ಸಂಪೂರ್ಣ ಪಾನ ನಿರೋಧ ಜಾರಿ: ಅಣ್ಣಾ
Update: 2016-11-07 16:39 IST
ಪುಣೆ,ನವೆಂಬರ್ 7: ಸಂಪೂರ್ಣ ಮದ್ಯಪಾನ ನಿರೋಧವನ್ನು ಕಡ್ಡಾಯವಾಗಿ ಜಾರಿಗೊಳಿಸಲಿಕ್ಕಾಗಿ ಹೋರಾಟಕ್ಕಿಳಿಯುವೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಹೇಳಿದ್ದಾರೆಂದು ವರದಿಯಾಗಿದೆ. ಮಾಹಿತಿ ಹಕ್ಕು ಕಾನೂನು ತರಲು ಶ್ರಮಿಸಿದಂತೆ ತನ್ನ ಮುಂದಿನ ಗುರಿ ಮದ್ಯ ಮಾರಾಟ, ಬಳಕೆ ನಿಷೇಧಕ್ಕಾಗಿ ಹೋರಾಡುವುದಾಗಿದೆ ಎಂದು ಅವರು ಹೇಳಿದ್ದಾರೆ.
ಎನ್‌ಜಿಒವೊಂದು ನಡೆಸಿದ್ದ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಅವರು ಮಹಿಳೆಯರು ಮಕ್ಕಳು ಮದ್ಯದ ದೋಷಫಲವನ್ನು ಅನುಭವಿಸುತ್ತಾರೆ. ಇದನ್ನು ತಡೆಯಲು ಸುದೃಢವಾದ ಕಾನೂನು ನಿರ್ಮಾಣ ಆಗಬೇಕು. ಮಹಾರಾಷ್ಟ್ರದಲ್ಲಿ ಇದಕ್ಕೆ ಸಂಬಂಧಿಸಿದ ಕಾನೂನಿನ ರೂಪರೇಷೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಹಸ್ತಾಂತರಿಸಿದ್ದೇನೆ. ಅವರು ಪೂರಕವಾಗಿ ಪ್ರತಿಕ್ರಿಯಿಸಿದ್ದಾರೆಂದು ಹಝಾರೆ ಹೇಳಿದ್ದಾರೆಂದು ವರದಿ ತಿಳಿಸಿದೆ.