×
Ad

ಬಂಟರ ಮಾತೃಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Update: 2016-11-07 17:13 IST

ಮಂಗಳೂರು, ನ.7: ಬಂಟರ ಯಾನೆ ನಾಡವರ ಮಾತೃಸಂಘದ 97ನೆ ವಾರ್ಷಿಕ ಸರ್ವಸದಸ್ಯರ ಸಭೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಬಂಟ್ಸ್‌ಹಾಸ್ಟೆಲ್ ಬಳಿಯ ಎಸ್‌ಅರ್‌ಎಸ್ ಹೋಮ್‌ನ ವಠಾರದಲ್ಲಿ ಸೋಮವಾರ ಜರಗಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, 230 ಕೋ.ರೂ. ಯೋಜನೆಯ ಕಟ್ಟಡ ಸಂಕೀರ್ಣದ ಕೆಲಸ ಕಾರ್ಯಗಳು ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ ಎಂದರು.

ಎಂ. ಕರುಣಾಕರ ಶೆಟ್ಟಿ, ನಿವೇದಿತಾ ಎನ್. ಶೆಟ್ಟಿ, ಚೇತನ್ ಕುಮಾರ್ ಶೆಟ್ಟಿ ಕಾರ್ಕಳ, ಕೃಷ್ಣ ಪ್ರಸಾದ್ ರೈ, ಕಾವು ಹೇಮನಾಥ ಶೆಟ್ಟಿ, ಜಯರಾಮ ಸಾಂತ, ಜಯಕರ ಶೆಟ್ಟಿ ಇಂದ್ರಾಳಿ, ಸಂಪಿಗೇಡಿ ಸಂಜೀವ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ ಕಾರ್ಕಳ, ಚಂದ್ರಹಾಸ ಡಿ. ಶೆಟ್ಟಿ, ಆಶಾಲತಾ ಬಿ. ರೈ ಬೆಳ್ತಂಗಡಿ, ಎಂ. ದಯಾನಂದ ರೈ ಪುತ್ತೂರು, ಪಿ.ಬಿ. ದಿವಾಕರ ರೈ ಸುಳ್ಯ, ಮುಕ್ತಾನಂದ ರೈ ಕಾಸರಗೋಡು ವರದಿ ಮಂಡಿಸಿದರು.

ಸಭೆಯಲ್ಲಿ ನಿಕಟಪೂರ್ವ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಕೋಶಾಧಿಕಾರಿ ಮನಮೋಹನ ಶೆಟ್ಟಿ, ಚುನಾವಣಾಧಿಕಾರಿ ಪೃಥ್ವಿರಾಜ್ ರೈ, ಉಪ ಚುನಾವಣಾಧಿಕಾರಿಗಳಾದ ಉಮೇಶ್ ಶೆಟ್ಟಿ, ನವೀನ್ ಶೆಟ್ಟಿ, ಲಾವಣ್ಯ ಶೆಟ್ಟಿ, ಸಚ್ಚಿದಾನಂದ ಹೆಗ್ಡೆ, ಸಂಪರ್ಕ ಪತ್ರಿಕೆಯ ಸಂಪಾದಕ ಬಿ. ರವೀಂದ್ರ ಶೆಟ್ಟಿ, ಉಪ ಸಂಪಾದಕ ಜಗನ್ನಾಥ ಶೆಟ್ಟಿ ಬಾಳ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು. ಮೇಘನಾಘ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಮನಮೋಹನ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಎಚ್. ಆರ್. ಶೆಟ್ಟಿ ಅವರನ್ನು ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಯಿತು. ನೂತನ ಕಾರ್ಯದರ್ಶಿ ವಸಂತ ಶೆಟ್ಟಿ ವಂದಿಸಿದರು. ಪ್ರಕಾಶ್ ಮೇಲಾಂಟ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News