×
Ad

ಪುತ್ತೂರು: ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆ

Update: 2016-11-07 18:22 IST

ಪುತ್ತೂರು,ನ.7: ರಸ್ತೆ ಬದಿ ಪೈಪ್ ಮಾರಾಟ ಮಾಡುತ್ತಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲದ ಕುಟುಂಬವೊಂದರ ಜೊತೆ ಶಾಲೆಯಿಂದ ಹೊರಗುಳಿದ ಮಕ್ಕಳಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಬೇಟಿ ನೀಡಿದ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗಡೆ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿಷ್ಣು ಪ್ರಸಾದ್ ತನಿಖೆ ನಡೆಸಿ ಮಕ್ಕಳನ್ನು ಮಾತೃ ಶಾಲೆಗೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ.

ಹಲವು ದಿನಗಳಿಂದ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೇಪುಳು ಎಂಬಲ್ಲಿ ಪೈಪ್ ಮಾರಾಟ ಮಾಡುತ್ತಿದ್ದ ಕುಟುಂಬದ ಜೊತೆ 6 ರಿಂದ 10 ವರ್ಷದೊಳಗಿನ ಮೂವರು ಮಕ್ಕಳು ಇರುವುದರ ಕುರಿತು ಶಿಕ್ಷಣ ಇಲಾಖೆಗೆ ಸ್ಥಳೀಯರು ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಈ ಬಗ್ಗೆ ತಕ್ಷಣವೇ ಸ್ಪಂದಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ತಿಳಿದು ಬಂದಿತ್ತು.

ಬಿ.ಆರ್.ಪಿ ವಿಜಯ ಕುಮಾರ್ ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯ ಲೋಕೇಶ್ ಗೌಡ ಅಲುಂಬುಡ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News